ಹಾಸನ: ಲೋಕಸಭೆ ಚುನಾವಣೆಗೆ ಇನ್ನೂ ಎರಡು ವರ್ಷಗಳಿವೆ. ಪ್ರಸ್ತುತ ನಮ್ಮ ಲೋಕಸಭೆಯ ಅಭ್ಯರ್ಥಿ ದೇವೇಗೌಡ ಅವರೇ ಇದ್ದಾರೆ. ಅವರು ಇರುವವರೆಗೂ ಈ ಪ್ರಶ್ನೆ ಉದ್ಭವವಾಗೊಲ್ಲ ಅಂತ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಹೇಳಿದ್ದಾರೆ.
ಮಗ ಪ್ರಜ್ವಲ್ ರೇವಣ್ಣ ಮುಂದಿನ ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗ ನಮ್ಮ ಮುಂದೆ ವಿಧಾನಸಭೆ ಚುನಾವಣೆಗಳಿದ್ದು, ಅದರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಎಲ್ಲರು ಶ್ರಮಿಸಲಿ ಎಂದು ಹೇಳಿದರು.
ಸದ್ಯಕ್ಕೆ ಪ್ರಜ್ವಲ್ ಸ್ಪರ್ಧೆ ಕುರಿತು ದೇವೇಗೌಡರು ಗ್ರೀನ್ ಸಿಗ್ನಲ್ ಕೊಟ್ಟಿರಬಹುದು. ಆದ್ರೆ ಪಕ್ಷದ ಇತರೆ ನಾಯಕರು, ಕಾರ್ಯಕರ್ತರನ್ನೂ ಸಹ ಈ ವಿಚಾರದಲ್ಲಿ ಗಣನೆಗೆ ತೆಗೆದುಕೊಳ್ಳಬೇಕಿದೆ ಎಂದರು.
ಇನ್ನು ವಿಧಾನಸಭೆಗೆ ಪ್ರಜ್ವಲ್ ಸ್ಪರ್ಧಿಸುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, ಈ ಹಿಂದೆಯೇ ನಾನು ಹೇಳಿದಂತೆ ನಾನು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರ್‍ಸ್ವಾಮಿ ಮಾತ್ರ ಸ್ಪರ್ಧಿಸಲಿದ್ದೇವೆ ಎಂದು ಹೇಳಿದ್ರು.