ನವದೆಹಲಿ: ತಮ್ಮ ಆಟೋಬಯೋಗ್ರಾಫಿಯಲ್ಲಿ ತಮ್ಮ ವಿರುದ್ಧ ಕಿಡಿಕಾರಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿಗೆ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ.
ಅಫ್ರಿದಿಗೆ ಟ್ವಿಟ್ಟರ್ ಖಾತೆಗೆ ಲಿಂಕ್ ಮಾಡಿ ಟ್ವೀಟ್ ಮಾಡಿರುವ ಗಂಭೀರ್, ಅಫ್ರಿದಿ ನೀನೊಬ್ಬ ವಿಚಿತ್ರ ವ್ಯಕ್ತಿ. ವೈದ್ಯಕೀಯ ಕಾರಣಕ್ಕಾಗಿ ನಾವು ಈಗಲೂ ಪಾಕಿಸ್ತಾನಿಯರಿಗೆ ವೀಸಾ ನೀಡುತ್ತಿದ್ದೇವೆ. ನಿನ್ನನ್ನು ನಾನೇ ಸ್ವತಃ ಮನೋತಜ್ಞರ ಬಳಿ ಕರೆದ್ಯೊಯುತ್ತೇನೆ ಎಂದು ಬರೆದುಕೊಂಡಿದ್ದಾರೆ.
Advertisement
ಈ ಹಿಂದೆಯೂ ಕೂಡ ಗಂಭೀರ್ ಹಾಗೂ ಅಫ್ರಿದಿ ನಡುವೆ ಹಲವು ಕಿತ್ತಾಟಗಳು ನಡೆದಿದ್ದು, ಕ್ರೀಡಾಂಗಣದ ಹೊರಗು, ಒಳಗೂ ಈ ಜಗಳಕ್ಕೆ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.
Advertisement
Advertisement
ಅಫ್ರಿದಿ ಹೇಳಿದ್ದೇನು?
ಇತ್ತೀಚೆಗೆ ತಮ್ಮ ಆಟೋಬಯೋಗ್ರಾಫಿ ಬಿಡುಗಡೆ ಮಾಡಿದ್ದ ಅಫ್ರಿದಿ, ತಮ್ಮ ಪುಸ್ತಕದಲ್ಲಿ ಗಂಭೀರ್ ಬಗ್ಗೆ ಪ್ರಸ್ತಾಪಿಸಿದ್ದರು. ಗೌತಮ್ ಗಂಭೀರ್ ಹಾಗೂ ನನ್ನ ನಡುವೆ ಹಲವು ಜಗಳಗಳು ಆಗಿದ್ದು, ಕೆಲವು ವೃತ್ತಿಗೆ ಸಂಬಂಧಿಸಿದ್ದರೆ ಕೆಲವು ವೈಯಕ್ತಿಕವಾಗಿತ್ತು. ಕ್ರಿಕೆಟಿನಲ್ಲಿ ಗಂಭೀರ್ ಗೌತಮ್ ಯಾವುದೇ ದಾಖಲೆಗಳನ್ನು ಹೊಂದಿಲ್ಲದಿದ್ದರೂ ಅವರಿಗೆ ಆ್ಯಟಿಟ್ಯೂಡ್ ಸಮಸ್ಯೆ ಇದೆ. ಆತ ತನ್ನನ್ನು ತಾನು ಡಾನ್ ಬ್ರಾಡ್ಮನ್, ಜೇಮ್ಸ್ ಬಾಂಡ್ ಮೀರಿಸುವ ಆಟಗಾರ ಎಂದು ತಿಳಿದುಕೊಂಡಿದ್ದಾರೆ ಎಂದಿದ್ದರು. ಅಲ್ಲದೇ 2007 ರಲ್ಲಿ ನಡೆದ ಜಗಳದ ಕುರಿತು ಪ್ರಸ್ತಾಪ ಮಾಡಿ, ಗೌತಮ್ ರನ್ ಓಡುತ್ತಿದ್ದ ವೇಳೆ ನಡೆದ ಘಟನೆ ನನಗೆ ನೆನಪಿದೆ. ಆತ ತನ್ನ ಒಂಟಿ ರನ್ ಪೂರ್ಣಗೊಳಿಸಲು ನನ್ನ ಮೇಲೆಯೇ ನುಗ್ಗಿ ಬಂದ. ಆ ವೇಳೆ ಅಂಪೈರ್ ನಡುವೆ ಬಂದು ತಿಳಿಸಿಗೊಳಿಸಿದ್ದರು ಎಂದು ಬರೆದುಕೊಂಡಿದ್ದರು.
Advertisement
@SAfridiOfficial you are a hilarious man!!! Anyway, we are still granting visas to Pakistanis for medical tourism. I will personally take you to a psychiatrist.
— Chowkidar Gautam Gambhir (@GautamGambhir) May 4, 2019