ಚಿಕ್ಕಮಗಳೂರು: ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ (Honey Trap) ವಿಚಾರವನ್ನು ಕೇಳುತ್ತಿದ್ದಂತೆ ಇಂಧನ ಸಚಿವ ಕೆ.ಜೆ.ಜಾರ್ಜ್ (K.J George) ಕೈ ಮುಗಿದು ನನ್ನನ್ನು ಕ್ಷಮಿಸಿ, ಎನೂ ಕೇಳಬೇಡಿ ಎಂದಿದ್ದಾರೆ.
ಚಿಕ್ಕಮಗಳೂರಲ್ಲಿ (Chikkamagaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಸಚಿವರು ಹಾಗೂ ಶಾಸಕರ ಹನಿಟ್ರ್ಯಾಪ್ ವಿಚಾರ ಕೇಳಿದ್ದಕ್ಕೆ, ದಯವಿಟ್ಟು ನನ್ನನ್ನು ಕ್ಷಮಿಸಿ, ನನ್ನನ್ನು ಏನೂ ಕೇಳಬೇಡಿ. ಯಾರು ಹೇಳಿದ್ರೋ ಅವರನ್ನೇ ಕೇಳಿ. ನಾನು ಹನಿಟ್ರ್ಯಾಪ್ ಬಗ್ಗೆ ಏನೂ ಮಾತಾಡಲ್ಲ. ನನ್ನ ಬಳಿ ಏನೂ ಇಲ್ಲ. ನಾನು ಎಲ್ಲಾದ್ರೂ ಹೇಳಿದ್ದೀನಾ? ಎಂದಿದ್ದಾರೆ. ಇದನ್ನೂ ಓದಿ: ರೀಲ್ಸ್ ತಂದ ಸಂಕಷ್ಟ: ರಜತ್ ಬದಲು ವಿಚಾರಣೆಗೆ ಹಾಜರಾದ ಪತ್ನಿ ಅಕ್ಷಿತಾ
ರಾಜಣ್ಣ ಅವರ ವಿಚಾರ ಮಾತನಾಡಿದವರು ಯಾರು? ಯತ್ನಾಳ್ ಅವರು, ರಾಜಣ್ಣ ಹೆಸರು ಹೇಳಿದ್ದಾರೆ. ಗೃಹ ಸಚಿವರು ತನಿಖೆ ಮಾಡ್ತೀವಿ ಎಂದಿದ್ದಾರೆ. ತನಿಖೆಯಾಗುವವರೆಗೂ ಕಾಯಬೇಕಲ್ವಾ? ಸುಮ್ನೆ ಏಕೆ ಗಲಾಟೆ ಮಾಡೋದು? ಸರ್ಕಾರ ಚೆನ್ನಾಗಿದೆ, ಸರ್ಕಾರಕ್ಕೆ ಏನೂ ತೊಂದರೆ ಇಲ್ಲ. ರಾಜ್ಯದಲ್ಲಿ ಜನ ಬಿಜೆಪಿ ಸಂಖ್ಯೆ ಕಡಿಮೆ ಮಾಡಿದ್ದಾರೆ. ಸದನದಲ್ಲಿ ಅವರದ್ದು ಬರೀ ಹಿಟ್ & ರನ್ ಅಷ್ಟೆ ಎಂದಿದ್ದಾರೆ.
ಫೋನ್ ಟ್ರ್ಯಾಪ್ ನಡೆದಿದೆ ಎಂಬ ವಿಚಾರವಾಗಿ, ಈ ಬಗ್ಗೆ ನಾನು ಯಾವುದೇ ದೂರು ನೀಡಿಲ್ಲ. ಯಾರದ್ದು ಫೋನ್ ಟ್ರ್ಯಾಪ್ ಆಗಿದೆ ಅವರು ಯಾರಿಗೆ ದೂರು ಕೊಡಬೇಕೋ ಅವರಿಗೆ ಕೊಡ್ತಾರೆ. ನನ್ನ ಫೋನ್ ಟ್ರ್ಯಾಪ್ ಆಗಿದ್ರೆ ಯಾರಿಗೆ ಹೇಳಬೇಕೋ ಅವರಿಗೆ ಹೇಳುತ್ತಿದ್ದೆ. ನನ್ನ ಫೋನ್ ಟ್ರ್ಯಾಪ್ ಆಗಿಲ್ಲ, ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರ ನಾನು ಮಾತನಾಡಲ್ಲ ಎಂದಿದ್ದಾರೆ. ಇದನ್ನೂ ಓದಿ: ಜೈ ಭೀಮ್, ಜೈ ಬಾಪು, ಜೈ ಸಂವಿಧಾನ ಕಾಂಗ್ರೆಸ್ ಪಕ್ಷದ ನಿರ್ಣಯ: ಪರಮೇಶ್ವರ್