ರಾಮನಗರ: ಸಿಎಂ ಬದಲಾವಣೆ ವಿಚಾರದಲ್ಲಿ ಮೂರನೇ ವ್ಯಕ್ತಿ ಮೂಗು ತೂರಿಸಬೇಡಿ ಅಂತ ಡಿಸಿಎಂ ಡಿಕೆಶಿ (DK Shivakumar) ಹೇಳಿದ್ದಾರೆ. ಹಾಗಾಗಿ ಮಧ್ಯೆ ತಲೆ ಹಾಕಲ್ಲ ಎಂದು ಶಾಸಕ ಹೆಚ್‌ಸಿ ಬಾಲಕೃಷ್ಣ (HC Balakrishna) ಹೇಳಿದ್ದಾರೆ.
ಡಿಸಿಎಂ ಡಿಕೆಶಿ ದೆಹಲಿ ಯಾತ್ರೆ ವಿಚಾರ ಕುರಿತು ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿಕೆಶಿಗೆ ಅಸ್ಸಾಂ ಚುನಾವಣೆ ಉಸ್ತುವಾರಿ ಕೊಟ್ಟಿದ್ದಾರೆ. ಆ ಬಗ್ಗೆ ಚರ್ಚೆ ಮಾಡಲು ದೆಹಲಿಗೆ ಹೋಗಿದ್ದಾರೆ. ಪಕ್ಷ ಅಂದಮೇಲೆ ನೂರಾರು ವಿಚಾರ ಇರುತ್ತೆ, ಅದನ್ನ ಚರ್ಚೆ ಮಾಡಲು ಹೋಗಿದ್ದಾರೆ. ಸಿಎಂ ಆಯ್ಕೆ ವಿಚಾರವಾಗಿ ಚರ್ಚೆ ಮಾಡುವಷ್ಟು ನಾವು ದೊಡ್ಡವರಲ್ಲ. ಇದು ನನಗೆ, ಸಿದ್ದರಾಮಯ್ಯಗೆ ಹಾಗೂ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಈ ಬಗ್ಗೆ ಮೂರನೇ ವ್ಯಕ್ತಿಗಳು ತಲೆಹಾಕಬೇಡಿ ಎಂದು ಈಗಾಗಲೇ ಡಿಸಿಎಂ ಹೇಳಿದ್ದಾರೆ. ಹಾಗಾಗಿ ಈ ವಿಚಾರದಲ್ಲಿ ನಾವು ಮೂಗು ತೂರಿಸಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪೌರಾಯುಕ್ತೆಗೆ ಧಮ್ಕಿ ಕೇಸ್; ನಿರೀಕ್ಷಣಾ ಜಾಮೀನಿಗೆ ರಾಜೀವ್ ಗೌಡ ಅರ್ಜಿ ಸಲ್ಲಿಕೆ
ಇನ್ನೂ ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ಹೈಕಮಾಂಡ್ ಕೇಳಿ ಹೇಳುತ್ತೇನೆ. ನಾನೇನು ಸಚಿವ ಸ್ಥಾನ ಬೇಕು ಅಂತ ಒತ್ತಡ ಹಾಕುತ್ತಿಲ್ಲ. ಅದನ್ನೆಲ್ಲ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು. ಸಿಎಂ ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ ಎಂಬ ಹೇಳಿಕೆ ವಿಚಾರ ಕುರಿತು ಮಾತನಾಡಿ, ಲೀಸ್ ಬೇಸ್ಡ್ ಸಿಎಂ ಯಾರು ಅಂತ ಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಳ್ಳಲಿ. ಕುಮಾರಸ್ವಾಮಿ ರಾಜ್ಯಾ ರಾಜಕಾರಣಕ್ಕಾದ್ರೂ ಬರಲಿ, ಸ್ಥಳೀಯ ಚುನಾವಣೆಗಾದ್ರೂ ಬರಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು ಎಂದರು. ಇದನ್ನೂ ಓದಿ: ಜನರು ಕೊಟ್ಟ ಅಧಿಕಾರವನ್ನು ಕಾಂಗ್ರೆಸ್ ಸ್ವಾರ್ಥಕ್ಕೆ ಬಳಸಿಕೊಳ್ತಿದೆ: ಬೊಮ್ಮಾಯಿ


