ತಂದೆಯ ಬ್ಯಾನರ್‌ನಲ್ಲೇ ಮತ್ತೆ ನಟಿಸಲಿದ್ದಾರಾ ನಿಖಿಲ್ ಕುಮಾರಸ್ವಾಮಿ?: ಯದುವೀರ ಡ್ರಾಪ್?

Public TV
1 Min Read
nikhil kumaraswamy 2

ರಾಜಕೀಯ ಒತ್ತಡಗಳಲ್ಲಿ ಸಿಲುಕಿರುವ ನಿಖಿಲ್ ಕುಮಾರಸ್ವಾಮಿ ವಿಧಾನಸಭೆ ಚುನಾವಣೆ ಮುಗಿಯುವತನಕ ಮತ್ತೆ ಸಿನಿಮಾ ರಂಗಕ್ಕೆ ಬರುವುದಿಲ್ಲ ಎನ್ನಲಾಗಿತ್ತು. ಇದಕ್ಕೆ ಪುಷ್ಠಿ ಎನ್ನುವಂತೆ ಅವರು ಮಾಡಬೇಕಿದ್ದ ಮತ್ತು ಈಗಾಗಲೇ ಘೋಷಣೆಯಾಗಿದ್ದ ಯದುವೀರ ಸಿನಿಮಾದ ಶೂಟಿಂಗ್ ನಡೆಯಬೇಕಿತ್ತು. ಆದರೆ, ಈ ಸಿನಿಮಾ ಈವರೆಗೂ ಟೇಕಾಫ್ ಆಗಲಿಲ್ಲ. ಹಾಗಾಗಿ ಚುನಾವಣೆ ಮುಗಿಯುವ ತನಕ ನಿಖಿಲ್ ಬಣ್ಣ ಹಚ್ಚುವುದು ಅನುಮಾನ ಎನ್ನುವ ಸುದ್ದಿ ಇತ್ತು.

nikhil kumaraswamy 1

ನಿಖಿಲ್, ಯದುವೀರ ಸಿನಿಮಾದ ಬದಲು ತಮ್ಮದೇ ಬ್ಯಾನರ್‌ನಲ್ಲಿ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎನ್ನುವುದು ಸದ್ಯದ ತಾಜಾ ನ್ಯೂಸ್. ಈಗಾಗಲೇ ಇವರ ತಂದೆಯ ಬ್ಯಾನರ್ ಚೆನ್ನಾಂಬಿಕಾ ಫಿಲ್ಮ್ಸ್ ಅಡಿಯಲ್ಲೇ ಜಾಗ್ವರ್ ಮತ್ತು ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ನಟಿಸಿದ್ದರು. ಮೂರನೇ ಸಿನಿಮಾ ಕೂಡ ಇದೇ ಬ್ಯಾನರ್ ನಲ್ಲಿಯೇ ತಯಾರಾಗಲಿದೆಯಂತೆ. ಈ ಸಿನಿಮಾ ಮುಗಿದ ನಂತರ ಯದುವೀರ ಚಿತ್ರವನ್ನು ಕೈಗೆತ್ತಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬಾಹುಬಲಿ ಪ್ರಭಾಸ್ ಗೆ ಕೊನೆಗೂ ಕೂಡಿ ಬಂತು ಕಂಕಣ ಭಾಗ್ಯ: ಹುಡುಗಿ ಯಾರು?

nikhil kumaraswamy 3

ನಿಖಿಲ್ ಅವರ ಹುಟ್ಟುಹಬ್ಬದ ದಿನದಂದು ಯದುವೀರ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿತ್ತು ಕೆ.ವಿ.ಎನ್ ಪ್ರೊಡಕ್ಷನ್. ಈ ಸಿನಿಮಾವನ್ನು ಮಂಜು ಅಥರ್ವ ಅವರು ನಿರ್ದೇಶನ ಮಾಡಬೇಕಿತ್ತು. ಆದರೆ, ಈವರೆಗೂ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯುಗಾದಿಯಿಂದ ಶೂಟಿಂಗ್ ಅಂದವರು, ಈವರೆಗೂ ಒಂದೇ ಒಂದು ದಿನ ಚಿತ್ರೀಕರಣ ಮಾಡಿಲ್ಲ. ಹೀಗಾಗಿ ಯದವೀರನಿಗೆ ಸ್ವಲ್ಪ ವಿರಾಮ ಹೇಳಿ, ತಮ್ಮ ತಂದೆಯ ಬ್ಯಾನರ್‌ನಲ್ಲೇ ಮುಂದುವರೆದಿದ್ದಾರೆ ಎನ್ನಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *