– ಯಡಿಯೂರಪ್ಪ ವಿರುದ್ಧ ಪೋಕ್ಸೊ ಕೇಸ್ ಪ್ರೂವ್ ಆಗಿದೆ – ವಿಜಯೇಂದ್ರಗೆ ಟಾಂಗ್
ಬೆಂಗಳೂರು: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್‌ನಲ್ಲಿ ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟರು.
Advertisement
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ಇಲ್ಲಸಲ್ಲದ ಮಾತು ಹೇಳಿ ವಿಜಯೇಂದ್ರ ಮರ್ಯಾದೆ ಕಳೆದುಕೊಳ್ಳೋದು ಬೇಡ. ಮಣಿಕಂಠ ರಾಥೋಡ್ ವಿಚಾರದಲ್ಲಿ ಇದೇ ಬಿಜೆಪಿ ಅವರು ಕಲಬುರ್ಗಿಗೆ ಬಂದು ನನ್ನ ರಾಜೀನಾಮೆ ಕೇಳಿದ್ರು. ಆಮೇಲೆ ಏನ್ ಆಯ್ತು. ಅ ಬಗ್ಗೆ ವಿಜಯೇಂದ್ರ ಮಾತಾಡಿದ್ರಾ? ಕಲಬುರ್ಗಿ ರಿಪಬ್ಲಿಕ್ ಅಂತೀರಾ ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಡಿ ಮೊದಲು. IPL ದಂಧೆ ಮಾಡ್ತಿರೋ ಶಾಸಕರು ಯಾರು? ಅಕ್ಕಿ ಕಳ್ಳತನ, ಹಾಲು ಕಳ್ಳತನ ಮಾಡಿ ಕೇಸ್ ಹಾಕಿಸಿಕೊಂಡವರು ಯಾರು? ಮರಳು ಮಾಫಿಯಾ ಮಾಡಿರೋರು ಯಾರು? ಇತಿಹಾಸ ತೆಗೆದು ನೋಡಿ ವಿಜಯೇಂದ್ರ ಮಾತಾಡಲಿ. ರಾಜು ಕಪನೂರು ಬಿಜೆಪಿ ಎಸ್ಸಿ ಸೆಲ್ ಅಧ್ಯಕ್ಷ ಆಗಿದ್ರು. ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದಿರೋದು. ನಾವೇನು ಓಡಿ ಹೋಗ್ತಿಲ್ಲ. ತನಿಖೆ ಆಗಲಿ. FSL ವರದಿ ಬರಲಿ ಎಂದರು. ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್ – ಭಾನುವಾರ ಮೃತ ಸಚಿನ್ ನಿವಾಸಕ್ಕೆ ಬಿಜೆಪಿ ನಿಯೋಗ ಭೇಟಿ
Advertisement
Advertisement
ಮೊದಲು ನಾನು ಕೇಳಿದ ಪ್ರಶ್ನೆಗೆ ಬಿಜೆಪಿ ಅವರು ಉತ್ತರ ಕೊಡಲಿ. ಯಡಿಯೂರಪ್ಪ ವಿರುದ್ಧ ಫೋಕ್ಸೊ ಕೇಸ್ ಪ್ರೂವ್ ಆಗಿದೆ. ಅದರ ಬಗ್ಗೆ ಮಾತಾಡಿ. ಮುನಿರತ್ನ ಕೇಸ್, ಸಿ.ಟಿ.ರವಿ ಕೇಸ್ ಬಗ್ಗೆ ಏನ್ ಹೇಳ್ತಾರೆ. ನನ್ನ ರಾಜೀನಾಮೆ ಕೇಳೋ ನೈತಿಕತೆ ಇದೆಯಾ ಅಂತ ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ್ ಕಿಡಿಕಾರಿದರು.
Advertisement
ಕೋವಿಡ್ ಹಗರಣದ ಬಗ್ಗೆ ಕುನ್ನಾ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಯಡಿಯೂರಪ್ಪ, ಶ್ರೀರಾಮುಲು ಅಕ್ರಮ ಮಾಡಿರೋ ಬಗ್ಗೆ. ಅವರ ರಾಜೀನಾಮೆ ಪಡೆದ್ರಾ? ದಾಖಲೆ ಇಟ್ಟುಕೊಂಡು ಪುರಾವೆ ಇಟ್ಟುಕೊಂಡು ಮಾತಾಡಿ. ನಿಮ್ಮ ಹೈಕಮಾಂಡ್ ಲೀಡರ್‌ಗಳ ಮನವೊಲಿಕೆ ಮಾಡೋಕೆ ಆರೋಪ ಮಾಡಬೇಡಿ ಅಂತ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟರು. ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್ – ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಸೇರಿ 6 ಮಂದಿ ವಿರುದ್ಧ ಎಫ್‍ಐಆರ್
ಬಿಜೆಪಿ ನಿಯೋಗದಿಂದ ಇಂದು ಸಚಿನ್ ನಿವಾಸಕ್ಕೆ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿಯೋಗ ಹೋಗಬೇಕಿರೋದು ಬೀದರ್‌ಗೆ ಅಲ್ಲ ಮುನಿರತ್ನ ಮನೆಗೆ. HIV ಪೀಡಿತರನ್ನ ದುರುಪಯೋಗ ಮಾಡಿಕೊಂಡು ರಾಜಕೀಯ ಮಾಡಿರೋದರ ಬಗ್ಗೆ ಸತ್ಯ ಸಂಶೋಧನೆ ಆಗಬೇಕು. ಕುನ್ನಾ ವರದಿಯಲ್ಲಿ ಹೇಳಿರೋ ಅಕ್ರಮದ ಬಗ್ಗೆ ಸತ್ಯ ಶೋಧನೆ ಆಗಬೇಕು. ಸಿಟಿ ರವಿ ಮಾತಾಡಿರೋ ಮಾತಿನ ಮೇಲೆ ಸತ್ಯ ಸಂಶೋಧನೆ ಆಗಬೇಕು. ಯಡಿಯೂರಪ್ಪ ಯಾವುದೇ ವೇದಿಕೆ ಹತ್ತಬಾರದು ಅಂತ ಅವರ ಪಕ್ಷದ ನಾಯಕರೇ ಹೇಳ್ತಿದ್ದಾರೆ. ಅದರ ಬಗ್ಗೆ ಸತ್ಯ ಶೋಧನೆ ಆಗಲಿ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಅದನ್ನ ಮೊದಲು ನೋಡಿಕೊಳ್ಳಿ. ಬಿಜೆಪಿ ಅವರು ತಮ್ಮ ಹುಳುಕು ಮುಚ್ಚಿ ಹಾಕೋಕೆ ಇವೆಲ್ಲ ಆರೋಪ ಮಾಡ್ತಿದ್ದಾರೆ. ವಕ್ಫ್ ವಿವಾದ ಮಾಡಿದ್ರು ಅದರ ಸತ್ಯ ಸಂಶೋಧನೆ ಏನು? ಅದರ ಬಗ್ಗೆ ಯಾಕೆ ಮಾತಾಡೊಲ್ಲ. ನನ್ನ ವಿರುದ್ಧ ಪುರಾವೆ ಇಲ್ಲ. ದಾಖಲಾತಿ ಇಲ್ಲ ಅಂತ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ನಾನು ರಾಜೀನಾಮೆ ಕೊಡೊಲ್ಲ. ಬಿಜೆಪಿ ಅವರು ಹೇಳಿರೋ ತಾಳಕ್ಕೆ ನಾನು ಯಾಕೆ ಕುಣಿಯಲಿ? ನಾನು ಯಾಕೆ ರಾಜೀನಾಮೆ ಕೊಡಲಿ. ಎಂಟು ಜನ ಆರೋಪಿಗಳಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಡೆತ್‌ನೋಟ್‌ನಲ್ಲಿ ಇಲ್ಲ. ಬಿಜೆಪಿ ಅವರು ಹೇಳಿದಂತೆ ರಾಜೀನಾಮೆ ಕೊಡೋಕೆ ಆಗುತ್ತಾ? ಏನೇ ಆದರೂ ತನಿಖೆ ಆಗಲಿ. ಹೆಣ ಬಿದ್ದಾಗ ಬಿಜೆಪಿಗೆ ರಾಜಕೀಯ ಬರುತ್ತದೆ. ಅದು ಬಿಟ್ಟು ನ್ಯಾಯ ಕೊಡಿಸೋದು ಇಲ್ಲ. ನನಗೆ ನೈತಿಕತೆ ಇರೋದಕ್ಕೆ ಬಂದು ಮಾತಾಡ್ತಿರೋದು. ನಿಮ್ಮ ಪ್ರಶ್ನೆಗೆ ಉತ್ತರ ಕೊಡ್ತಿರೋದು. ಡೆತ್‌ನೋಟ್‌ನಲ್ಲಿ ನನ್ನ ಹೆಸರು ಎಲ್ಲಿದೆ. ಮೊದಲು ಡೆತ್‌ನೋಟ್ ಸರಿಯಾಗಿ ಬಿಜೆಪಿ ಅವರು ನೋಡಲಿ. ಬ್ಯಾಂಕ್‌ನಿಂದ ವ್ಯವಹಾರ ಮಾಡಿದ್ದಾರೆ. ಬಿಜೆಪಿ ಅವರು ಪ್ರೈವೇಟ್ ತನಿಖೆ ಏನಾದ್ರು ನಡೆಸುತ್ತಿದ್ದಾರೆ. ಸತ್ಯವನ್ನು ಸುಳ್ಳು ಮಾಡೋದು, ಸುಳ್ಳನ್ನ ಸತ್ಯ ಮಾಡೋದು ಬಿಜೆಪಿ ಅವರ ಗುಣ. ನಿಮ್ಮ ಕಲಬುರ್ಗಿ ಶಾಸಕರ ಇತಿಹಾಸ ಮೊದಲು ತಿಳಿದುಕೊಳ್ಳಿ. ಆಮೇಲೆ ಚರ್ಚೆಗೆ ಬನ್ನಿ ಅಂತ ಸವಾಲ್ ಹಾಕಿದರು. ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಅತ್ಮಹತ್ಯೆ ಕೇಸ್ – ಇಬ್ಬರು ಹೆಡ್‌ಕಾನ್‌ಸ್ಟೇಬಲ್ ಸಸ್ಪೆಂಡ್
ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಸಾಮಾನ್ಯ ಕಾರ್ಯಕರ್ತನಂತೆ ಮಾತಾಡೋದು ಬೇಡ. ಬಿಜೆಪಿ ಅವರು ಬೀದರ್‌ನಿಂದ ಚಾಮರಾಜನಗರದ ವರೆಗೂ ಚೀರಾಡಿ, ಬಟ್ಟೆ ಹರಿದುಕೊಳ್ಳಲಿ ಐ ಡೋಂಟ್ ಕೇರ್. ಪಾರದರ್ಶಕವಾಗಿ ನಾನು ರಾಜಕೀಯ ಮಾಡ್ತಿದ್ದೇನೆ. ಯಾವುದೇ ಭ್ರಷ್ಟಾಚಾರ ನಾನು ಅವಧಿಯಲ್ಲಿ ಮಾಡಿಲ್ಲ. ನಾನು RSS ವಿರೋಧ ಮಾಡ್ತಿರೋದಕ್ಕೆ, ಅವರ ಸಿದ್ಧಾಂತ ವಿರೋಧ ಮಾಡ್ತಿರೋದಕ್ಕೆ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ. ನೀವು ಏನೇ ಮಾಡಿದ್ರು ನಾನು ಹೆದರೊಲ್ಲ. ಐಟಿ, ಇಡಿ, ಸಿಬಿಐ, ಮೋದಿ, ಅಮಿತ್ ಶಾ, ರಾಜ್ಯಪಾಲರ ಮೂಲಕ ಏನಾದ್ರು ಮಾಡ್ತೀರಾ ನಾನು ಯಾವುದಕ್ಕೂ ಹೆದರೊಲ್ಲ ಎಂದರು.