‘ಲಕ್ಷಣ’ ಸೀರಿಯಲ್ ಅಂತ್ಯ- ಬಿಗ್ ಬಾಸ್‌ಗೆ ಸುಕೃತಾ ನಾಗ್?

Public TV
1 Min Read
sukrutha nag

ಕಿರುತೆರೆಯ ಜನಪ್ರಿಯ ಸೀರಿಯಲ್ ‘ಲಕ್ಷಣ’ (Lakshana) ಈ ವಾರಾಂತ್ಯದಲ್ಲಿ ಗುಡ್ ಬೈ ಹೇಳುತ್ತಿದೆ. ಇದೀಗ ‘ಲಕ್ಷಣ’ ಧಾರಾವಾಹಿಯ ಸಹ ಕಲಾವಿದರ ಜೊತೆಗಿನ ಜರ್ನಿಯನ್ನ ವಿಶೇಷ ವಿಡಿಯೋ ಮೂಲಕ ನಟಿ ಸುಕೃತಾ ನಾಗ್ (Sukrutha Nag) ನೆನಪಿಸಿಕೊಂಡಿದ್ದಾರೆ. ಲಕ್ಷಣ ಸೀರಿಯಲ್‌ ಅಂತ್ಯದ ಬಗ್ಗೆ ಸ್ಪಷ್ಟನೆ ಸಿಕ್ಕ ಬೆನ್ನಲ್ಲೇ ಬಿಗ್ ಬಾಸ್‌ಗೆ ನಟಿ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಕೂಡ ಸಖತ್‌ ಸದ್ದು ಮಾಡುತ್ತಿದೆ.

sukrutha nag

ಬಿಗ್ ಬಾಸ್ ಕಾರ್ಯಕ್ರಮ ಅಧಿಕೃತ ಘೋಷಣೆ ಮುಂಚೆಯೇ ಸುಕೃತಾ ನಾಗ್ ದೊಡ್ಮನೆ ಆಟಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದೀಗ ‘ಲಕ್ಷಣ’ ಸೀರಿಯಲ್ ಕೂಡ ಬಿಗ್ ಬಾಸ್ ಶೋಗಾಗಿ ಅಂತ್ಯವಾಗುತ್ತಿದೆ. ಕಲಾವಿದರ ಜೊತೆಗಿನ ಜರ್ನಿ ಬಗ್ಗೆ ನಟಿ ಸುಕೃತಾ ಚೆಂದದ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಪತ್ನಿ ಜೊತೆ ಮಾಲ್ಡೀವ್ಸ್‌ನಲ್ಲಿ ‘ವಿಕ್ರಾಂತ್‌ ರೋಣ’ ನಟ

‘ಲಕ್ಷಣ’ ಸೀರಿಯಲ್ ಅಂತ್ಯವಾಗ್ತಿರೋದು ಖಾತ್ರಿಯಾಗುತ್ತಿದಂತೆ ಸುಕೃತಾ ನಾಗ್ ಬಿಗ್ ಬಾಸ್‌ಗೆ(Bigg Boss Kannada 10) ಎಂಟ್ರಿ ಕೊಡುವ ಬಗ್ಗೆ ಗುಸು ಗುಸು ಶುರುವಾಗಿದೆ. ನೆಗೆಟಿವ್ ಶೇಡ್‌ನಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದ ನಟಿ ದೊಡ್ಮನೆಗೆ ಎಂಟ್ರಿ ನಿಜ ಎನ್ನಲಾಗುತ್ತಿದೆ. ಸುಕೃತಾ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ. ಇದು ಅದೆಷ್ಟರ ಮಟ್ಟಿಗೆ ಸತ್ಯ ಎಂಬುದನ್ನ ಅಕ್ಟೋಬರ್ 8ರಂದು ಬಿಗ್‌ ಬಾಸ್ ಗ್ರ್ಯಾಂಡ್ ಓಪನಿಂಗ್‌ವೆರೆಗೂ ಕಾಯಬೇಕಿದೆ.

ಬಾಲನಟಿಯಾಗಿ ಸುಕೃತಾ 25ಕ್ಕೂ ಹೆಚ್ಚು ಸೀರಿಯಲ್ ಮಾಡಿದ್ದಾರೆ. ಕಾದಂಬರಿ, ಅಗ್ನಿಸಾಕ್ಷಿ (Agnisakshi), ಡ್ಯಾನ್ಸಿಂಗ್ ಸ್ಟಾರ್ ಶೋನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಸದ್ಯ ಬಿಗ್ ಬಾಸ್‌ಗೆ ಗ್ಲ್ಯಾಮರ್ ಗೊಂಬೆ ಸುಕೃತಾ ನಾಗ್ ಕಾಲಿಡುವ ಮೂಲಕ ಮನೆಯ ರಂಗನ್ನ ಹೆಚ್ಚಿಸುತ್ತಾರಾ? ಕಾದುನೋಡಬೇಕಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article