ʻಈಗʼ, ಬಾಹುಬಲಿ ಬಳಿಕ ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ವಾರಣಾಸಿ’ಯಲ್ಲಿ (Varanasi Movie) ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ ಎಂಬ ಮಾತು ಹೇಳಿಬಂದಿದೆ. ಸುದೀಪ್ (Kichcha Sudeep) ಈ ಸಿನಿಮಾದಲ್ಲಿ ಹನುಮಂತನಾಗಿ ಸಾಹಸ ಪ್ರದರ್ಶಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರಾಜಮೌಳಿ (SS Rajamouli) ಸಿನಿಮಾ ವಾರಣಾಸಿ ಚಿತ್ರದ ಪ್ರಮುಖ ಪಾತ್ರಗಳನ್ನ ರಿವೀಲ್ ಮಾಡಲಾಗಿದೆ. ಪ್ರಿನ್ಸ್ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರ್ ಸಿನಿಮಾದ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನುಳಿದಂತೆ ಎಲ್ಲಾ ಮುಖ್ಯ ಪಾತ್ರಗಳಿಗೂ ಹುಡುಕಾಟ ಶುರುವಾಗಿದ್ದು ವೀರ ಆಂಜನೇಯನ ಪಾತ್ರಕ್ಕಾಗಿ ಸುದೀಪ್ ನಟಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ರಾಜಮೌಳಿ ಸಿನಿಮಾದಲ್ಲಿ ಪ್ರತಿ ಪಾತ್ರಕ್ಕೂ ಪ್ರಾಶಸ್ತ್ಯವಿರುತ್ತೆ. ಯಾಕಂದ್ರೆ ಹೀರೋ ಹೊರತಾಗಿ ಪ್ರತಿ ಪಾತ್ರವನ್ನೂ ಕಥೆಯಲ್ಲಿ ಮೆರೆಸುವ ನಿರ್ದೇಶಕ ರಾಜಮೌಳಿ. ಹೀಗಾಗಿ ವಾರಣಾಸಿಯ ಪ್ರಮುಖ ಪಾತ್ರವಾಗಿರುವ ಹನುಮಂತನ ಪಾತ್ರಕ್ಕಾಗಿ ಕಿಚ್ಚ ಸುದೀಪ್‌ಗೆ ರಾಜಮೌಳಿ ಆಫರ್ ಮಾಡಿದ್ದು, ಕಿಚ್ಚ ಶೆಡ್ಯೂಲ್ ನೋಡಿಕೊಂಡು ಹಾಗೂ ಪಾತ್ರದ ಪ್ರಾಮುಖ್ಯತೆಯನ್ನ ಪರಿಗಣಿಸಿ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲಿಗೆ ವಿಶ್ವವೇ ತಿರುಗಿ ನೋಡಲು ಸಜ್ಜಾಗಿರುವ ಬಿಗ್ ಚಿತ್ರದಲ್ಲಿ ಸುದೀಪ್ ಇರ್ತಾರೆ ಅನ್ನೋದು ಕನ್ನಡ ಸಿನಿ ರಸಿಕರ ಹೆಮ್ಮೆ. ಕಿಚ್ಚ ಗ್ರೀನ್ ಸಿಗ್ನಲ್ ಕೊಡೋದಷ್ಟೇ ಬಾಕಿ ಇರೋದು.

ಅಂದಹಾಗೆ ರಾಜಮೌಳಿ ಸುದೀಪ್‌ಗೆ ನಿರ್ದೇಶಿಸಿದ್ದ `ಈಗ’ ಸಿನಿಮಾ ಟಾಲಿವುಡ್‌ನಲ್ಲಿ ಸಾರ್ವಕಾಲಿಕ ಹಿಟ್ ಚಿತ್ರ. ಸಾಮಾನ್ಯವಾಗಿ ರಾಜಮೌಳಿ ತಮ್ಮ ಕಥಾನಾಯಕನನ್ನ ಮುಂದಿನ ಸಿನಿಮಾಗಳಿಗೆ ರಿಪೀಟ್ ಮಾಡಲ್ಲ. ಆದರೆ `ಈಗ’ ಬಳಿಕವೂ ರಾಜಮೌಳಿ ಕಿಚ್ಚನನ್ನ ಬಿಡಲು ಸಿದ್ಧರಿರಲಿಲ್ಲ. ಪರಿಣಾಮ ಬಾಹುಬಲಿ ಚಿತ್ರಕ್ಕಾಗಿ ವಿಶೇಷ ಪಾತ್ರದಲ್ಲಿ ಸುದೀಪ್ ಅಭಿನಯಿಸಿದ್ದರು. ಮೂಲಗಳ ಪ್ರಕಾರ, ಬಾಹುಬಲಿ 2 ಚಿತ್ರದಲ್ಲಿ ಸುದೀಪ್ ಪಾತ್ರ ಕಂಟಿನ್ಯೂ ಆಗಬೇಕಿತ್ತು. ಆದ್ರೆ ಕಿಚ್ಚನೇ ಕ್ವಿಟ್ ಮಾಡಿದ್ದರು ಎನ್ನಲಾಗ್ತಿದೆ.
ಕಾರಣ ಬಾಹುಬಲಿ ಭಾಗ-1ರಲ್ಲಿ ಕಿಚ್ಚನ ಸ್ಕ್ರೀನ್‌ಸ್ಪೇಸ್ ಬಗ್ಗೆ ಕಿಚ್ಚನ ಫ್ಯಾನ್ಸ್ ಅಸಮಾಧಾನಗೊಂಡಿದ್ದರು. ಬಾಹುಬಲಿ ಪಾರ್ಟ್-2 ಸಹವಾಸವೂ ಬೇಡ ಎಂದು ಕಿಚ್ಚ ಎಡಗೈಯಿಂದ ತಳ್ಳಿದ್ರಂತೆ. ಇದೀಗ ಇಲ್ಲಿಯವರೆಗೆ ದೇಶ ಮಾಡಲಾಗದ ಬಂಡವಾಳದಲ್ಲಿ ತಯಾರಾಗ್ತಿರುವ ʻವಾರಣಾಸಿʼ ಚಿತ್ರಕ್ಕಾಗಿ ಸುದೀಪ್‌ಗೆ ಆಫರ್ ಬಂದಿದೆ. ಸುದೀಪ್ ಒಪ್ಪಿಕೊಳ್ತಾರಾ ನೋಡ್ಬೇಕು.

