ಬೆಂಗಳೂರು: ಇಂದು ಬೆಳಗ್ಗೆ ಕಾಂಗ್ರೆಸ್ ಮುಖಂಡ ಕೆ.ಎಚ್. ಮುನಿಯಪ್ಪ ಅವರು ಸುಧಾಕರ್ ಅವರು ಭೇಟಿ ಮಾಡುವ ಮೂಲಕ ಭರೀ ಕುತೂಹಲ ಮೂಡಿಸಿದ್ದರು. ಯಾಕೆಂದರೆ ಕೆ.ಎಚ್.ಮುನಿಯಪ್ಪ ಅವರು ಕಾಂಗ್ರೆಸ್ ತೊರೆಯುತ್ತಾರೆ ಎಂಬ ಉಹಾಪೋಹಗಳು ಹರಿದಾಡುತ್ತಿದ್ದವು. ಆದರೆ ಈ ವದಂತಿಗಳಿಗೆ ಇದೀಗ ಕೆ.ಎಚ್.ಮುನಿಯಪ್ಪ ತೆರೆ ಎಳೆದಿದ್ದಾರೆ.
Advertisement
ಸುಧಾಕರ್ ಭೇಟಿಯಾಗಿ ಬಳಿಕ ಮಾತನಾಡಿದ ಅವರು, ನಾನು ಕಾಂಗ್ರೆಸ್ ತೊರೆಯಲ್ಲ ಎಂದು ಸ್ಪಷ್ಟಪಡಿಸಿದರು. ರಾಜಕೀಯ ಹೊರತಾದ ಸಂಬಂಧ ಸುಧಾಕರ್ ಜೊತೆಗಿದೆ. ಎಲ್ಲವೂ ಊಹಾಪೋಹಗಳು ಅಷ್ಟೇ. ಕೆಲವು ಬಾರಿ ಹೈಕಮಾಂಡ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕುಮಾರಣ್ಣನ ಜೊತೆ ನನ್ನನ್ನು ಜನ ಒಂದುಗೂಡಿಸಿದ್ದಾರೆ: ಜೆಡಿಎಸ್‌ನಲ್ಲೇ ಉಳಿಯುತ್ತಾರಾ ಜಿಟಿಡಿ?
Advertisement
Advertisement
ಕೆಲವೊಮ್ಮೆ ಅಸಮಾಧಾನ ಇದ್ದರೂ ಒಪ್ಪಿಕೊಳ್ಳಬೇಕಾಗುತ್ತದೆ. ಹೈಕಮಾಂಡ್‍ಗೆ ಎಲ್ಲವೂ ಕೂಡ ಗೊತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಸಹಿಸಿಕೊಳ್ಳಬೇಕಾಗುತ್ತದೆ. ಸುರ್ಜೆವಾಲಾ ಕೂಡ ನನ್ನ ಜೊತೆಗೆ ಮಾತನಾಡಿದ್ದಾರೆ. ಸುಧಾಕರ್ ತಂದೆ ಜೊತೆಗೂ ಒಡನಾಟ ಇದೆ. ಸುಧಾಕರ್ ಜೊತೆಗೂ ಕೂಡ ಒಡನಾಟವಿದೆ, ಅದು ರಾಜಕೀಯ ವಿಚಾರವಲ್ಲ ಎಂದು ಹೇಳಿದರು.
Advertisement
ಇದೇ ವೇಳೆ ಗುಲಾಂ ನಬಿ ಆಜಾದ್ ರಾಜೀನಾಮೆಗೆ ಪ್ರತಕ್ರಿಯಿಸಿ, ಗುಲಾಂ ನಬಿ ಆಜಾದ್ 50 ವರ್ಷಗಳಿಂದ ಪಕ್ಷದಲ್ಲಿ ಇದ್ದವರು. ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಅವರಿಗೆ ಹೀಗೆ ಆಗಬಾರದಿತ್ತು. ಬಹಳಷ್ಟು ವಿಚಾರಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ.ಈಗ ಪಕ್ಷದಲ್ಲಿ ಇದ್ದೇನೆ, ಇಲ್ಲಿಯೇ ಮುಂದುವರಿಯುತ್ತೇನೆ ಎಂದು ಮುನಿಯಪ್ಪ ತಿಳಿಸಿದರು.