ಬೆಂಗಳೂರು: ಕಾಂಗ್ರೆಸ್ (Congress) ಮುಖಂಡ ಕೆಜಿಎಫ್ ಬಾಬುರನ್ನು (KGF Babu) ಜೆಡಿಎಸ್‍ಗೆ (JDS) ಸೇರ್ಪಡೆ ಮಾಡಿಕೊಳ್ಳಲು ಜೆಡಿಎಸ್ ಪಕ್ಷ ಆಹ್ವಾನ ನೀಡಿದೆ.
Advertisement
ಖುದ್ದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಇಂದು ಕೆಜಿಎಫ್ ಬಾಬು ಮನೆಗೆ ಹೋಗಿ ಸುಮಾರು ಎರಡೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದರು. ಚಿಕ್ಕಪೇಟೆ (Chikkapete) ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಆಸೆಯನ್ನು ಕೆಜಿಎಫ್ ಬಾಬು ಅವರು ಹೊಂದಿದ್ದಾರೆ. ಆದರೆ ಕಾಂಗ್ರೆಸ್‍ನಲ್ಲಿ ಟಿಕೆಟ್ ಸಿಗುವುದು ಡೌಟ್ ಹಿನ್ನೆಲೆ ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳುವ ಬಗ್ಗೆ ಸಿಎಂ ಇಬ್ರಾಹಿಂ ಜೊತೆಗೆ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಶ್ರೀಸಾಮಾನ್ಯನನ್ನು ಅವಮಾನಿಸಬೇಡಿ – ಮೋದಿ ವಿರುದ್ಧ ಕೇಜ್ರಿವಾಲ್ ಕಿಡಿ
Advertisement
Advertisement
ನಂತರ ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಕೆಜಿಎಫ್ ಬಾಬು ದುಡ್ಡಿನ ಆಸೆ ಇಲ್ಲದೇ, ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಪಕ್ಷಕ್ಕೆ ಕರೆದಿದ್ದೇನೆ. ಅವರು ಬಂದರೆ ಚಿಕ್ಕಪೇಟೆ ಕ್ಷೇತ್ರದಲ್ಲಿ ಟಿಕೆಟ್ ನೀಡುವ ಬಗ್ಗೆ ದೇವೇಗೌಡರು (H.D.Devegowda), ಕುಮಾರಸ್ವಾಮಿ (H.D.KumarSwamy) ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊಲೆಗಾರರಿಗೆ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿದ ಕೋರ್ಟ್
Advertisement
ಬಳಿಕ ಮಾತನಾಡಿದ ಕೆಜಿಎಫ್ ಬಾಬು ಅವರು, ಹಿರಿಯರು ಮಾರ್ಗದರ್ಶನ ನೀಡಿ ಪಕ್ಷಕ್ಕೆ ಕರೆದಿದ್ದಾರೆ. ಯೋಚನೆ ಮಾಡಿ ತೀರ್ಮಾನ ಮಾಡುತ್ತೇನೆ. ಚಿಕ್ಕಪೇಟೆ ನಾನು ಹುಟ್ಟಿದ ಊರು. ಇದಕ್ಕಾಗಿ ಜನರಿಗೆ ಮನೆ ಕಟ್ಟಿಸಿಕೊಡುತ್ತಿದ್ದೇನೆ. ಯಾರು ಏನೇ ಮಾಡಿದರೂ, ನಾನು ಜನರ ಸೇವೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಹೈಕೋರ್ಟ್‍ನಿಂದ ಆದೇಶ ತಂದಾದರೂ ಬಡವರಿಗೆ ಮನೆ ಕಟ್ಟಿಸಿಕೊಡುತ್ತೇನೆ ಎಂದಿದ್ದಾರೆ.