ಬೆಂಗಳೂರು: ಕರ್ನಾಟಕದಲ್ಲಿ ಲಿಕ್ಕರ್ ಬ್ಯಾನ್. ಈ ಸುದ್ದಿ ಅದೆಷ್ಟು ಹೆಣ್ಣು ಮಕ್ಕಳಿಗೆ ಖುಷಿ ಕೊಡುತ್ತೋ ಏನೋ. ಹಾಗೇ ಕರ್ನಾಟಕದ ಮದ್ಯ ಪ್ರಿಯರಿಗೆ ಶಾಕಿಂಗ್ ಸುದ್ದಿಯೂ ಆಗಬಹುದು. ಇಂತಹದ್ದೊಂದು ಐಡಿಯಾವನ್ನ ಸಿಎಂ ಸಿದ್ದರಾಮಯ್ಯ ಹರಿಬಿಟ್ಟಿದ್ದಾರೆ. ಶೀಘ್ರದಲ್ಲೇ ಕರ್ನಾಟಕದಲ್ಲಿ ಲಿಕ್ಕರ್ ಬ್ಯಾನ್ ಮಾಡಿ ಕರ್ನಾಟಕವನ್ನು ಮದ್ಯ ಮುಕ್ತವಾಗಿ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಸಿದ್ಧತೆ ಮಾಡುತ್ತಿದ್ದಾರೆ ಎಂದು ಹೇಳಲಾಗ್ತಿದೆ.
Advertisement
Advertisement
ಇದು ಎಲೆಕ್ಷನ್ ವರ್ಷ ಆಗಿರೋ ಕಾರಣಕ್ಕೆ ವಿಪಕ್ಷಗಳಿಗಿಂತ ನಾವೇ ಮತದಾರರು, ಅದರಲ್ಲೂ ಮಹಿಳಾ ಮತದಾರರ ಮನ ಗೆಲ್ಲಬೇಕೆಂದು ಪ್ಲ್ಯಾನ್ ಸಿದ್ದ ಮಾಡಿಕೊಂಡಿದ್ದಾರೆ ಸಿದ್ದರಾಮಯ್ಯ. ಇದೇ ಕಾರಣಕ್ಕೆ ಲಿಕ್ಕರ್ ಬ್ಯಾನ್ ಮಾಡಿರುವ ಬಿಹಾರಕ್ಕೆ ಅಧಿಕಾರಿಗಳ ತಂಡವನ್ನು ಕಳುಹಿಸಿ ಅಲ್ಲಿನ ಸಕ್ಸಸ್ ಮಾಡೆಲ್ ಬಗ್ಗೆ ಮಾಹಿತಿ ಪಡಿದುಕೊಂಡಿರೋ ಸಿಎಂ, ರಾಜ್ಯದಲ್ಲೂ ಎಲೆಕ್ಷನ್ ವೇಳೆ ಇದೇ ಪ್ಲ್ಯಾನ್ ಮಾಡೋದು ಉತ್ತಮ ಅನ್ನೋ ತೀರ್ಮಾನಕ್ಕೆ ಬಂದಿದ್ದಾರಂತೆ.
Advertisement
Advertisement
ಜೆಡಿಎಸ್, ಬಿಜೆಪಿ ಭರವಸೆಯನ್ನೇ ಬಂಡವಾಳ ಮಾಡಿಕೊಳ್ಳೋಕೆ ಹೊರಟ ಸಿಎಂ, 18 ಸಾವಿರ ಕೋಟಿ ರೂಪಾಯಿ ಆದಾಯವೇ ಬೇಡ ಅನ್ನೋಕೆ ಹೊರಟಿದ್ದಾರೆ. ಇಷ್ಟರ ನಡುವೆ ಲಿಕ್ಕರ್ ಬ್ಯಾನ್ ಆದ್ರೆ ಏನು ಕೊಡೋದು ಅನ್ನೋ ಪ್ರಶ್ನೆ ಬಂದಾಗ ನೀರಾ ಅದರಲ್ಲೂ ಟೆಟ್ರಾ ಪ್ಯಾಕ್‍ಗಳ ಮೂಲಕ ಕೊಡೋಕೂ ಕೂಡ ಪ್ಲ್ಯಾನ್ ಸಿದ್ದ ಮಾಡಿಕೊಳ್ಳಲು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಲಾಗ್ತಿದೆ.