ಬೆಂಗಳೂರು: ಫೈನಾನ್ಸ್ ಬಿಲ್‍ಗೆ ಯಾವುದೇ ವಿರೋಧ ಮಾಡದೇ ಬೆಂಬಲ ನೀಡಲು ಜೆಡಿಎಸ್ ತೀರ್ಮಾನ ಕೈಗೊಂಡಿದೆ.
ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್ ಇದಾಗಿದ್ದು, ಅದಕ್ಕೆ ಯಾರೂ ವಿರೋಧ ಮಾಡಬೇಡಿ. ಒಂದು ವೇಳೆ ಫೈನಾನ್ಸ್ ಬಿಲ್ ವಿರೋಧ ಮಾಡಿದರೆ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ. ನಾವೇ ಮಂಡಿಸಿದ ಬಜೆಟ್‍ಗೆ ವಿರೋಧ ಮಾಡುವುದು ಸರಿಯಲ್ಲ. ಹೀಗಾಗಿ ಬೆಂಬಲ ಕೊಡುವುದು ಸೂಕ್ತವೆಂದು ನಿರ್ಧಾರ ಮಾಡಿರುವುದಾಗಿ ಜೆಡಿಎಸ್ ವಲಯದಲ್ಲಿ ಭಾರೀ ಚರ್ಚೆಯಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Advertisement
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕೂಡ ಫೈನಾನ್ಸ್ ಬಿಲ್‍ಗೆ ಬೆಂಬಲ ಕೊಡುವಂತೆ ಪಕ್ಷದ ಶಾಸಕರಿಗೆ ಸೂಚನೆ ನೀಡಿದ್ದಾರಂತೆ. ಹೀಗಾಗಿ ಯಾವುದೇ ವಿರೋಧ ಮಾಡದೇ ಇರಲು ಜೆಡಿಎಸ್ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
Advertisement
ಬಿ.ಎಸ್.ಯಡಿಯೂರಪ್ಪ ಅವರು ಇಂದು ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಲಿದ್ದಾರೆ. ಜೊತೆಗೆ ಹಣಕಾಸು ವಿಧೇಯಕಕ್ಕೆ ಒಪ್ಪಿಗೆ ಪಡೆಯಲಿದ್ದಾರೆ.