ಕೊಪ್ಪಳ: ಮುಂಬರುವ ಲೋಕಸಭಾ ಚುನಾವಣೆಯ ವೇಳೆಗೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardhan Reddy) ಬಿಜೆಪಿಗೆ ಸೇರುತ್ತಾರೆ ಎಂಬ ಚರ್ಚೆಯೊಂದು ರಾಜ್ಯ ರಾಜಕೀಯ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಈ ಬಾರಿಯ ದೀಪಾವಳಿಗೂ ಮುನ್ನವೇ ತಮ್ಮ ಕೆಆರ್ ಪಿಪಿ ಪಕ್ಷದ ಎಲ್ಲ ಘಟಕಗಳನ್ನು ಗಣಿದಣಿ ವಿಸರ್ಜನೆ ಮಾಡಿಸಿದ್ದಾರೆ. ಇದರ ಬೆನ್ನಲ್ಲೇ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಗಂಗಾವತಿಯಲ್ಲಿ ಕೇಳಿ ಬಂದಿವೆ.
Advertisement
Advertisement
ಈ ನಡುವೆ ಬಿ.ವೈ ವಿಜಯೇಂದ್ರ (BY Vijayendra) ಬಿಜೆಪಿ ರಾಜ್ಯಾಧ್ಯಕ್ಷ ಆಗಿದ್ದು, ಈ ಮಾತುಗಳಿಗೆ ಬಲ ಬಂದಿದೆ. ಜನಾರ್ದನ ರೆಡ್ಡಿ ಮೊದಲಿನಿಂದಲೂ ಯಡಿಯೂರಪ್ಪ ಅವರ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಬದಲಾಗಿ ಅವರು ನನ್ನ ರಾಜಕೀಯ ಬೆಳವಣಿಗೆಗೆ ಕಾರಣರಾದವರು ಎಂದು ಹೇಳಿದ್ದರು. ಇದರಿಂದ ಕೆಆರ್ ಪಿಪಿಯಿಂದ ಶಾಸಕರಾಗಿರೋ ಜನಾರ್ದನ ರೆಡ್ಡಿ ಬಿಜೆಪಿ ಸೇರಬಹುದು ಎಂದು ಕ್ಷೇತ್ರದಲ್ಲಿ ಚರ್ಚೆಯಾಗುತ್ತಿದೆ.
Advertisement
ಜೊತೆಗೆ ಜನಾರ್ದನ ರೆಡ್ಡಿ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ವಿಜಯೇಂದ್ರ ಕೂಡ ಒಲವು ತೋರಿದ್ದರು ಎಂಬ ಮಾತುಗಳೂ ಹರಿದಾಡುತ್ತಿವೆ. ಇದನ್ನೂ ಓದಿ: ವಿದ್ಯುತ್ ಕದ್ದ ಕುಮಾರಸ್ವಾಮಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಏನಿದೆ?: ಸಿಎಂ ಕಿಡಿ