ಬೆಂಗಳೂರು: ಬಿಪಿಎಲ್ ಕಾರ್ಡ್‌ಗಳ (BPL Card) ವಿತರಣೆಯಲ್ಲಿ ಭಾರೀ ಎಡವಟ್ಟಾಗಿದೆ. ಬಡವರಿಗೆ ಹಂಚಬೇಕಾದ ಕಾರ್ಡ್‌ಗಳು ಉಳ್ಳವರಿಗೇ ಹೆಚ್ಚು ಹಂಚಿಕೆ ಆಗಿದೆ ಅನ್ನೋ ಸತ್ಯ ಬಯಲಾಗಿದೆ.
ಬಡವರಿಗಿಂತಲೂ ಬಡತನ ರೇಖೆಗಿಂತ ಮೇಲಿದ್ದವರಿಗೆ ಹೆಚ್ಚಿನ ಪ್ರಮಾಣದ ಕಾರ್ಡ್‌ಗಳನ್ನು ಪಡೆದಿದ್ದಾರೆ. ಬಡತನ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬಿಪಿಎಲ್ ಕಾರ್ಡ್ ಹಂಚಿಕೆ ಆಗಿವೆ. ಜಿಲ್ಲಾವಾರು ಬಡವರ ಸಂಖ್ಯೆಗಿಂತಲೂ ಹತ್ತಾರು ಪಟ್ಟು ಹೆಚ್ಚು ಕಾರ್ಡ್‌ಗಳ ಹಂಚಿಕೆ ಆಗಿದೆ. ಯಾವ ಜಿಲ್ಲೆಗಳಲ್ಲಿ ಬಡತನ ಪ್ರಮಾಣ ಶೇ.1 ರಿಂದ 5 ಇದೆಯೋ ಅಲ್ಲೇ 80% ಗಿಂತಲೂ ಅಧಿಕ ಬಿಪಿಎಲ್ ಕಾರ್ಡ್ ಹಂಚಿಕೆ ಆಗಿದೆ. ಅನರ್ಹರ ಬಳಿ ಬಿಪಿಎಲ್ ಕಾರ್ಡ್‌ಗಳಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆರ್ಥಿಕ ಹೊಡೆತ ಬಿದ್ದಿದೆ. ಹೀಗಾಗಿ ಅನರ್ಹ ಬಿಪಿಎಲ್ ಕಾರ್ಡ್ ರದ್ದತಿಗೆ ಆಹಾರ ಇಲಾಖೆ ಅಭಿಯಾನಕ್ಕೆ ನಿರ್ಧಾರ ಕೈಗೊಂಡಿದೆ. ಗ್ಯಾರಂಟಿಗಳ ಪರಿಶೀಲನೆ ನೆಪದಲ್ಲಿ ಪಂಚಾಯಿತಿ ಮಟ್ಟದಿಂದ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಅಭಿಯಾನ ನಡೆಸಲಿದೆ ಎಂದು ಉನ್ನತ ಮೂಲಗಳು ʻಪಬ್ಲಿಕ್ ಟಿವಿʼಗೆ ತಿಳಿಸಿವೆ.
ಅಂಕಿ ಅಂಶ
ಮಂಡ್ಯ
ಜನಸಂಖ್ಯೆ – 16.92 ಲಕ್ಷ
ಬಿಪಿಎಲ್ ಕಾರ್ಡ್-15.33 ಲಕ್ಷ (90.6%)
ಬಡತನ ಪ್ರಮಾಣ-2.47%
ರಾಮನಗರ
ಜನಸಂಖ್ಯೆ – 10.49 ಲಕ್ಷ
ಬಿಪಿಎಲ್ ಕಾರ್ಡ್-9.29 ಲಕ್ಷ (88.6%)
ಬಡತನ ಪ್ರಮಾಣ- 0.88%
ಹಾಸನ
ಜನಸಂಖ್ಯೆ – 16.82 ಲಕ್ಷ
ಬಿಪಿಎಲ್ ಕಾರ್ಡ್- 14.61 ಲಕ್ಷ (86.9%)
ಬಡತನ ಪ್ರಮಾಣ- 2.43%
ಚಾಮರಾಜನಗರ
ಜನಸಂಖ್ಯೆ – 9.97 ಲಕ್ಷ
ಬಿಪಿಎಲ್ ಕಾರ್ಡ್- 8.66 ಲಕ್ಷ(86.8%)
ಬಡತನ ಪ್ರಮಾಣ- 5.15%
ತುಮಕೂರು
ಜನಸಂಖ್ಯೆ – 25.51 ಲಕ್ಷ
ಬಿಪಿಎಲ್ ಕಾರ್ಡ್- 21.88 ಲಕ್ಷ(85.6%)
ಬಡತನ ಪ್ರಮಾಣ- 4.69%
ಹಾವೇರಿ
ಜನಸಂಖ್ಯೆ – 16.63 ಲಕ್ಷ
ಬಿಪಿಎಲ್ ಕಾರ್ಡ್- 14.05 ಲಕ್ಷ(84.5%)
ಬಡತನ ಪ್ರಮಾಣ- 11.38%
ಚಿಕ್ಕಮಗಳೂರು
ಜನಸಂಖ್ಯೆ – 10.31 ಲಕ್ಷ
ಬಿಪಿಎಲ್ ಕಾರ್ಡ್- 8.41 ಲಕ್ಷ(81.6%)
ಬಡತನ ಪ್ರಮಾಣ- 3.74%
ಚಿತ್ರದುರ್ಗ
ಜನಸಂಖ್ಯೆ – 16.94 ಲಕ್ಷ
ಬಿಪಿಎಲ್ ಕಾರ್ಡ್- 13.77 ಲಕ್ಷ(81.3%)
ಬಡತನ ಪ್ರಮಾಣ- 5.84
ಚಿಕ್ಕಬಳ್ಳಾಪುರ
ಜನಸಂಖ್ಯೆ – 12.79 ಲಕ್ಷ
ಬಿಪಿಎಲ್ ಕಾರ್ಡ್- 10.17 ಲಕ್ಷ(79.5%)
ಬಡತನ ಪ್ರಮಾಣ- 3.39%
ದಾವಣಗೆರೆ
ಜನಸಂಖ್ಯೆ – 16.50 ಲಕ್ಷ
ಬಿಪಿಎಲ್ ಕಾರ್ಡ್- 13/03 ಲಕ್ಷ(79%)
ಬಡತನ ಪ್ರಮಾಣ 5.95%