ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್‍ನ ಹೊಸ ರೂಪಾಂತರಿ ತಳಿ ಓಮಿಕ್ರಾನ್ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಕೊರೊನಾ ವ್ಯಾಕ್ಸಿನ್ ಬೂಸ್ಟರ್ ಡೋಸ್ ನೀಡುವ ಬಗ್ಗೆ ಒತ್ತಡಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ, ಬೂಸ್ಟರ್ ಡೋಸ್‍ನ ಅಗತ್ಯತೆ, ಸಾಧಕ ಬಾಧಕಗಳ ಬಗ್ಗೆ ವಿಸ್ತೃತ ವರದಿ ನೀಡಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.
Advertisement
ಡಿಪಾರ್ಟ್‍ಮೆಂಟ್ ಆಫ್ ಬಯೋಟೆಕ್ನಾಲಜಿಯ ಪ್ರೀಮಿಯರ್ ಇನ್‍ಸ್ಟಿಟ್ಯೂಟ್ ಟ್ರಾನ್ಸ್‌ಲೇಶನಲ್ ಹೆಲ್ತ್ ಸೈನ್ಸ್ ಅಂಡ್ ಟೆಕ್ನಾಲಜಿ ಇನ್‍ಸ್ಟಿಟ್ಯೂಟ್ (ಟಿಎಚ್‍ಎಸ್‍ಟಿಐ ) ನೇತೃತ್ವದಲ್ಲಿ ಈ ಅಧ್ಯಯನ ನಡೆಯಲಿದ್ದು, ಅಧ್ಯಯನದಲ್ಲಿ ಮೂರು ಸಾವಿರ ಜನರು ಒಳಗೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ: ಆಫ್ಘನ್ ಮಹಿಳೆಯರ ಶಿಕ್ಷಣ ಬಗ್ಗೆ ಮಾತನಾಡಿ ಟ್ರೋಲ್‍ಗೆ ಒಳಗಾದ ಪಾಕ್ ಪ್ರಧಾನಿ
Advertisement
Advertisement
ಆರು ತಿಂಗಳ ಹಿಂದೆ ಕೊವ್ಯಾಕ್ಸಿನ್, ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್‍ನ ಎರಡು ಡೋಸ್ ಲಸಿಕೆ ಪಡೆದ ಜನರ ಮೇಲೆ ಈ ಅಧ್ಯಯನ ನಡೆಯಲಿದ್ದು, ದೇಹದಲ್ಲಿ ವ್ಯಾಕ್ಸಿನ್‍ನ ಪ್ರಭಾವ ಕ್ಷೀಣಿಸುತ್ತಿದಿಯಾ? ಬೂಸ್ಟರ್ ಡೋಸ್ ಅವಶ್ಯಕತೆ ಇದಿಯೇ? ಎಂದು ಕಂಡುಕೊಳ್ಳುವ ಪ್ರಯತ್ನ ತಜ್ಞರು ಮಾಡಲಿದ್ದಾರೆ. ಇದನ್ನೂ ಓದಿ: ಅಶ್ಲೀಲ ಫೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ – ಯುವಕ ಅರೆಸ್ಟ್
Advertisement
ಅಧ್ಯಯನಕ್ಕೆ 40 ವರ್ಷಕ್ಕಿಂತ ಮೇಲ್ಪಟ್ಟ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು, ವ್ಯಾಕ್ಸಿನೇಷನ್‍ಗೆ ಮುಂಚಿತವಾಗಿ ಕೋವಿಡ್-19 ಸೋಂಕಿಗೆ ಒಳಗಾದ ಜನರು ಮತ್ತು ಕೊಮೊರ್ಬಿಡ್ ಪರಿಸ್ಥಿತಿ ಹೊಂದಿರುವವರನ್ನು ಬಳಸಿಕೊಳ್ಳಲಾಗಿದೆ.
ಈ ಅಧ್ಯಯನದಿಂದ ಬರುವ ಮಾಹಿತಿಯನ್ನು ಆಧರಿಸಿ ದೇಶದಲ್ಲಿ ಬೂಸ್ಟರ್ ಡೋಸ್ ನೀಡುವ ಬಗ್ಗೆ ಅಂತಿಮ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎನ್ನಲಾಗಿದ್ದು ವರದಿ ಬರುವವರೆಗೂ ಯಥಪರಿಸ್ಥಿತಿಯನ್ನು ಮುಂದುವರಿಸಲು ತಿರ್ಮಾನಿಸಿದೆ.