ಈತ ಎಂಟ್ರಿ ಕೊಟ್ರೆ ಸಾಕು ಯಾವಾಗ ಸಿಕ್ಸ್ ಬಾರಿಸ್ತಾನೋ? ಅರ್ಧಕ್ಕೆ ಕೈಕೋಡ್ತಾನೋ? ಅನ್ನೂ ಟೆನ್ಷನ್, ಒಮ್ಮೆ ಇದ್ದಕ್ಕಿದ್ದಂತೆ ಸಿಕ್ಸರ್-ಬೌಂಡರಿ ಬಾರಿಸೋದು ಮತ್ತೊಮ್ಮೆ ಬೇಗನೇ ಔಟಾಗಿ ನಿರಾಸೆ ಮೂಡಿಸುತ್ತಿದ್ದ ಕ್ರಿಕೆಟಿಗ ಈಗ ಟೀಂ ಇಂಡಿಯಾ ತಂಡಕ್ಕೆ ನಾಯಕನಾಗುವ ರೇಸ್‌ನಲ್ಲಿದ್ದಾರೆ. ಹೌದು. ವೆಸ್ಟ್ ಇಂಡೀಸ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಟೀಂ ಇಂಡಿಯಾಕ್ಕೆ ಸರಣಿ ಜಯ ತಂದುಕೊಟ್ಟ ಹಾರ್ದಿಕ್ ಪಾಂಡ್ಯ (Hardik Pandya), ಎಂ.ಎಸ್ ಧೋನಿಯಂತೆ (MS Dhoni) ಸಕ್ಸಸ್‌ಫುಲ್ ಕ್ಯಾಪ್ಟನ್ ಆಗ್ತಾರೆ ಅನ್ನೋ ಕೂಗು ಕೇಳಿಬರ್ತಿದೆ.
Advertisement
ಟೀಂ ಇಂಡಿಯಾದಲ್ಲಿ (Team India) ಸಂಪೂರ್ಣವಾಗಿ ಟಿ20 ನಾಯಕತ್ವ ವಹಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ವೆಸ್ಟ್ ಇಂಡೀಸ್ (West Indies) ವಿರುದ್ಧ ಕೊನೆಯ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಬ್ಯಾಟಿಂಗ್ ಮಾಡಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗಾಗಿ ಕೊಹ್ಲಿ, ರೋಹಿತ್ ಶರ್ಮಾ ಬಳಿಕ ಹೊಸ ನಾಯಕತ್ವಕ್ಕೆ ಹುಡುಕಾಟ ನಡೆಸಿರುವ ಬಿಸಿಸಿಐಗೆ ಹಾರ್ದಿಕ್ ಪಾಂಡ್ಯ ಪರ ಕೂಗು ಕೇಳಿಬಂದಿದೆ. ಇದನ್ನೂ ಓದಿ: 200 ರನ್‌ಗಳ ಭರ್ಜರಿ ಗೆಲುವು – ವಿಂಡೀಸ್ ವಿರುದ್ಧ ಸತತ 13ನೇ ಏಕದಿನ ಸರಣಿ ಗೆದ್ದ ಭಾರತ
Advertisement
2016ರ ಜನವರಿಯಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ನಡೆದ ಅಂತಾರಾಷ್ಟ್ರೀಯ ಟಿ20 ಸರಣಿ ಮೂಲಕ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟ ಹಾರ್ದಿಕ್ ಪಾಂಡ್ಯ, ಅದೇ ವರ್ಷ ಅಕ್ಟೋಬರ್‌ನಲ್ಲಿ ಏಕದಿನ ತಂಡಕ್ಕೂ ಪದಾರ್ಪಣೆ ಮಾಡಿದ್ರು. 2017ರಲ್ಲಿ ಟೆಸ್ಟ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೂ ಫಾರ್ಮ್ ಕಂಡುಕೊಳ್ಳದ ಕಾರಣ 2018ರ ಆಗಸ್ಟ್ ನಂತ್ರ ಟೆಸ್ಟ್ ಕ್ರಿಕೆಟ್‌ನಿಂದ ಹೊರಗುಳಿದರು. ಈವರೆಗೆ 11 ಟೆಸ್ಟ್, 77 ಏಕದಿನ ಪಂದ್ಯ, 87 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಪಾಂಡ್ಯ 123 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ.
Advertisement
Advertisement
2022ರಲ್ಲಿ ಐಪಿಎಲ್‌ಗೆ ಸೇರ್ಪಡೆಯಾದ ಗುಜರಾತ್ ಟೈಟಾನ್ಸ್ (Gujarat Taitans) ತಂಡದ ಮೂಲಕ ನಾಯಕತ್ವದ ಜವಾಬ್ದಾರಿ ಹೊತ್ತ ಪಾಂಡ್ಯ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಗೆದ್ದು ನಂಬಿಕೆ ಉಳಿಸಿಕೊಂಡರು. 2023ರ ಆವೃತ್ತಿಯಲ್ಲಿ ಸತತ 2ನೇ ಬಾರಿಗೆ ತಂಡವನ್ನ ಫೈನಲ್ ಹಾದಿಗೆ ಕೊಂಡೊಯ್ದರು. ಪ್ರಸಕ್ತ ವರ್ಷದ ಆರಂಭದಿಂದಲೂ ಸಂಪೂರ್ಣ ಟಿ20 ನಾಯಕತ್ವ ವಹಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಸರಣಿ ಜಯ ತಂದುಕೊಟ್ಟಿದ್ದರು. ಇದೀಗ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ವಿಂಡೀಸ್ ಪರ ಜವಾಬ್ದಾರಿಯುತ ಆಟವಾಡಿದ ಪಾಂಡ್ಯ ಗೆಲುವು ತಂದುಕೊಡುವ ಮೂಲಕ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಐಷಾರಾಮಿ ಬೇಡ, ಕನಿಷ್ಠ ಸೌಲಭ್ಯವನ್ನು ವೆಸ್ಟ್ ಇಂಡೀಸ್ ಮಾಡಿಲ್ಲ – ಹಾರ್ದಿಕ್ ಪಾಂಡ್ಯ ಗರಂ
ಮಹಿಯಂತೆ ಮೈಂಡ್‌ಗೇಮ್ ಆಡಿದ್ರಾ ಪಾಂಡ್ಯ?
ಹಾರ್ದಿಕ್ ಪಾಂಡ್ಯ ಬೆಳವಣಿಗೆಯಿಂದ ಟೀಂ ಇಂಡಿಯಾದಲ್ಲಿ ಹೊಸ ಅಲೆ ಶುರುವಾಗಿದೆ. 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್, 2010ರಲ್ಲಿ ಏಷ್ಯಾಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ತಂದುಕೊಟ್ಟ ಮಹಿ ಅವರ ಸ್ಥಾನ ತುಂಬಲು ಪಾಂಡ್ಯ ಸೂಕ್ತ ಅನ್ನೋ ಅಭಿಪ್ರಾಯಗಳೂ ಕೇಳಿ ಬರ್ತಿವೆ. ಏಕೆಂದರೆ ವಿಂಡೀಸ್ ಕೊನೆಯ ಪಂದ್ಯದಲ್ಲಿ ಮೈಂಡ್‌ಗೇಮ್ ಆಡಿದ ಪಾಂಡ್ಯ ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟರು. ಆರಂಭಿಕ ಇಶಾನ್ ಕಿಶನ್ ಔಟಾಗುತ್ತಿದ್ದಂತೆ ಋತುರಾಜ್ ಗಾಯಕ್ವಾಡ್‌ಗೆ ಚಾನ್ಸ್ ಕೊಟ್ಟರು. ನಂತರ 4ನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್‌ರನ್ನ ಕಣಕ್ಕಿಳಿಸಿದರು. ನಂತ್ರ ಪಕ್ಕಾ ಪ್ಲ್ಯಾನ್‌ನೊಂದಿಗೆ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದರು. ಇದರಿಂದ ಪಾಂಡ್ಯ ಸಹ ಮಹಿಯಂತೆ ಸಕ್ಸಸ್‌ಫುಲ್ ಕ್ಯಾಪ್ಟನ್ ಆಗ್ತಾರೆ ಎನ್ನಲಾಗುತ್ತಿದೆ.
Web Stories