– ಕೇಂದ್ರ ಸಚಿವ ಸ್ಥಾನ, ವಿಪಕ್ಷ ಸ್ಥಾನ ನನಗೆ ಬೇಡ ಎಂದ ಹೆಚ್‌ಡಿಕೆ
ಬೆಂಗಳೂರು: ಎನ್‌ಡಿಎ (NDA) ಸಭೆಗೆ ಆಹ್ವಾನ ನೀಡಿದರೆ ನಾನು ಸಭೆಗೆ ಹೋಗುತ್ತೇನೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.
Advertisement
ಬಿಜೆಪಿ (BJP) ಜೊತೆ ದೋಸ್ತಿ ಬಗ್ಗೆ ಮೊದಲ ಬಾರಿಗೆ ‘ಪಬ್ಲಿಕ್ ಟಿವಿ’ ಜೊತೆ ಮುಕ್ತವಾಗಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಎನ್‌ಡಿಎ ಮತ್ತು ಯುಪಿಎ (UPA) ಸಭೆಗೆ ಇನ್ನೂ ನನಗೆ ಆಹ್ವಾನ ಬಂದಿಲ್ಲ. ಯುಪಿಎ ಸಭೆಗೆ ಆಹ್ವಾನ ಬಂದರೂ ನಾವು ಹೋಗಲ್ಲ. ಎನ್‌ಡಿಎ ಸಭೆಗೆ ಆಹ್ವಾನ ಬಂದರೆ ಹೋಗಿ ಚರ್ಚೆ ಮಾಡಿ ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: PTCL ಕಾಯ್ದೆ ತಿದ್ದುಪಡಿಗೆ ಬದ್ಧ; ದಲಿತರಿಗೆ ಭೂಮಿ ಪರಭಾರೆ ಆಗ್ಲೇಬೇಕು ಅನ್ನೋದ್ರಲ್ಲಿ ರಾಜಿ ಇಲ್ಲ: ಸಿದ್ದರಾಮಯ್ಯ
Advertisement
Advertisement
ಕುಮಾರಸ್ವಾಮಿ ಬಿಜೆಪಿ ಜೊತೆ ದೋಸ್ತಿ ಮಾಡಿಕೊಂಡರೆ ಕೇಂದ್ರ ಸಚಿವ ಸ್ಥಾನ, ವಿರೋಧ ಪಕ್ಷದ ಸ್ಥಾನ ನೀಡಬಹುದು ಎಂಬ ಚರ್ಚೆಗೆ ಉತ್ತರ ನೀಡಿದ ಅವರು, ನನಗೆ ಕೇಂದ್ರ ಸಚಿವ ಸ್ಥಾನ ಅಥವಾ ವಿಪಕ್ಷ ಸ್ಥಾನದ ಅವಶ್ಯಕತೆ ಇಲ್ಲ. ಅದರ ಚರ್ಚೆಯೂ ಮಾಡಲ್ಲ. ಬಿಜೆಪಿಯಲ್ಲಿ ಸಮರ್ಥರು ಇದ್ದಾರೆ. ಅವರನ್ನು ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡಿ ಎಂದು ಕೇಂದ್ರದ ನಾಯಕರಿಗೆ ಹೇಳುತ್ತೇನೆ ಎಂದರು. ಇದನ್ನೂ ಓದಿ: ಸರ್ವಾಧಿಕಾರ ವಿರೋಧಿಸೋರು ಬನ್ನಿ- ಹೆಚ್‍ಡಿಕೆ ವಿರುದ್ಧ ವೇಣುಗೋಪಾಲ್ ಕಿಡಿ
Advertisement
ನನಗೆ ವಿಪಕ್ಷ ನಾಯಕನ ಆಸೆ ಇಲ್ಲ. ಜನರ ಕೊಟ್ಟ ಸ್ಥಾನದಲ್ಲಿ ಕೂರಲು ನಾನು ಸಿದ್ಧ ಎಂದು ತಿಳಿಸಿದ ಅವರು, ಕೇಂದ್ರದ ಬಿಜೆಪಿ ನಾಯಕರು ಕರೆದರೆ ಹೋಗಿ ಮಾತನಾಡುತ್ತೇನೆ. ಲೋಕಸಭೆಗೆ ಜೊತೆಗೆ ಹೋಗುವ ಬಗ್ಗೆ ಆಹ್ವಾನ ಬಂದರೆ ಹೋಗಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ತಾಕತ್ತಿದ್ದರೆ ಸಿದ್ದರಾಮಯ್ಯ ಒಂದು ಪಕ್ಷ ಕಟ್ಟಿ, 5 ಸ್ಥಾನ ಗೆದ್ದು ತೋರಿಸಲಿ – HDK ಬಹಿರಂಗ ಸವಾಲ್
Web Stories