ಬೆಂಗಳೂರು: ಹೊಳೆನರಸೀಪುರ ಲೈಂಗಿಕ ದೌರ್ಜನ್ಯ (Sexual Assault Case) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ಅವರಿಗೆ ಜಾಮೀನು ಅರ್ಜಿ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಮ್ಯಾಜಿಸ್ಟ್ರೇಟ್ 42 ರ ನ್ಯಾಯಾಧೀಶರು ಮುಖ್ಯ ಅರ್ಜಿಯ ತೀರ್ಪು ಪ್ರಕಟಿಸಲಿದ್ದಾರೆ. ಪ್ರಕರಣ ಸಂಬಂಧ ಜಾಮೀನು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಇಬ್ಬರು ಎಸ್ ಪಿ ಪಿಗಳು ರೇವಣ್ಣಗೆ ಜಾಮೀನು ನೀಡದಂತೆ ಪ್ರಬಲ ವಾದ ಮಂಡಿಸಿದ್ದರು. ಎಸ್‍ಪಿಪಿಗಳ ವಾದಕ್ಕೆ ರೇವಣ್ಣ ಪರ ವಕೀಲ ಸಿ ವಿ ನಾಗೇಶ್ ಅವರು ಪ್ರಬಲ ಪ್ರತಿವಾದ ಸಲ್ಲಿಸಿದ್ದರು.
ಎರಡೂ ಕಡೆಯ ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ಇಂದಿಗೆ ಇಂದಿಗೆ ಆದೇಶ ಕಾಯ್ದಿರಿಸಿದ್ದರು. ಸದ್ಯ ಮಧ್ಯಂತರ ಜಾಮೀನಿನ ಮೇಲಿರುವ ರೇವಣ್ಣಗೆ ಇಂದು ಜಾಮೀನು ಸಿಗುತ್ತಾ ಅಥವಾ ಮತ್ತೆ ಜೈಲು ಫಿಕ್ಸಾ ಎಂಬ ಕುತೂಹಲ ಮನೆ ಮಾಡಿದೆ. ಒಂದು ವೇಳೆ ಜಾಮೀನು ಸಿಕ್ಕರೆ ರೇವಣ್ಣಗೆ ಬಿಗ್ ರಿಲೀಫ್ ಸಿಗಲಿದೆ. ಇದನ್ನೂ ಓದಿ: ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ಎಸೆತ- ಪೊಲೀಸರಿಂದ ಬಿಗಿಭದ್ರತೆ