– ಒಂದೆರಡು ವರ್ಷದಲ್ಲಿ ಭಾರತದಿಂದ ಮಾವೋವಾದ ನಿರ್ಮೂಲನೆ
ನವದೆಹಲಿ: ನಕ್ಸಲರು ಶಸ್ತ್ರಾಸ್ತ್ರ ಎತ್ತಿದರೆ ತಕ್ಕ ಪ್ರತಿಕ್ರಿಯೆ ಸಿಗಲಿದೆ. ಇನ್ನೂ ಕಾಲ ಮಿಂಚಿಲ್ಲ, ಶಸ್ತ್ರಾಸ್ತ್ರಗಳನ್ನು ತ್ಯೆಜಿಸಿ ಶರಣಾಗುವಂತೆ ಮಾವೋವಾದಿಗಳಿಗೆ (Maoism) ಮೋದಿ ಹಾಗೂ ನಾನು ಸೂಚಿಸಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಎಚ್ಚರಿಸಿದ್ದಾರೆ.
Advertisement
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ, ಕೇವಲ ಒಂದರಿಂದ ಎರಡು ವರ್ಷದಲ್ಲಿ ಮಾವೋವಾದವನ್ನು ದೇಶದಲ್ಲಿ ನಿರ್ಮೂಲನೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
Advertisement
Advertisement
ಛತ್ತೀಸ್‍ಗಢದಲ್ಲಿ (Chhattisgarh) ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಕ್ಸಲರ ವಿರುದ್ಧ ಯಾವುದೇ ಕಾರ್ಯಾಚರಣೆ ಇರಲಿಲ್ಲ. ನಮ್ಮ ಆಡಳಿತದಲ್ಲಿ 90 ದಿನ ಕಾರ್ಯಾಚರಣೆ ನಡೆಸಿ, 87 ನಕ್ಸಲರನ್ನು ಹತ್ಯೆಗೈಯಲಾಗಿದೆ. 123 ನಕ್ಸಲರನ್ನು ಬಂಧಿಸಲಾಗಿದೆ. ಅಲ್ಲದೇ 253 ನಕ್ಸಲರು ಶರಣಾಗಿದ್ದಾರೆ. ಛತ್ತೀಸ್‍ಗಢದ ಬಸ್ತಾರ್ ಪ್ರದೇಶದಲ್ಲಿ ಈ ವರ್ಷ ಭದ್ರತಾ ಪಡೆಗಳೊಂದಿಗೆ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 79 ಮಾವೋವಾದಿಗಳು ಹತ್ಯೆಗೀಡಾಗಿದ್ದಾರೆ. ಕಾಂಗ್ರೆಸ್ ಈ ಎನ್‍ಕೌಂಟರ್‌ನ್ನು ನಕಲಿ ಎಂದು ಹೇಳಿದೆ ಎಂದು ಕಿಡಿಕಾರಿದ್ದಾರೆ.
Advertisement
ಇತ್ತೀಚೆಗೆ ಛತ್ತೀಸ್‍ಗಢದ ಕಂಕೇರ್‍ನಲ್ಲಿ ನಡೆದ 29 ನಕ್ಸಲರ ಹತ್ಯೆ ವಿಚಾರವನ್ನು ಉಲ್ಲೇಖಿಸಿ ನಕ್ಸಲಿಸಂ ವಿರುದ್ಧ ಕೇಂದ್ರ ಕೈಗೊಂಡ ಕ್ರಮಗಳನ್ನು ಅವರು ಒತ್ತಿ ಹೇಳಿದರು. ಈ ಎನ್‍ಕೌಂಟರ್‍ನಲ್ಲಿ ತಲೆಗೆ 25 ಲಕ್ಷ ಘೋಸಿಸಲಾದ ನಕ್ಸಲ್ ನಾಯಕ ಶಂಕರ್ ರಾವ್ ಹತ್ಯೆಯಾಗಿದ್ದಾನೆ ಎಂದರು.