– ಕುಮಾರಸ್ವಾಮಿ ಸ್ವಯಂ ಘೋಷಿತ ದೇವಮಾನವರಾ?
ರಾಮನಗರ: ಶ್ರೀಗಳ ಬಗ್ಗೆ ಹೆಚ್‌ಡಿಕೆ (HD Kumaraswamy) ಚಿಲ್ಲರೆ ಹೇಳಿಕೆ ನೀಡುವುದನ್ನು ಬಿಡಬೇಕು. ಹಾಗಿದ್ರೆ ಕುಮಾರಸ್ವಾಮಿಗೆ ಶ್ರೀಗಳ ಆಶೀರ್ವಾದ ಬೇಡವಾ ಎಂದು ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ (HC Balakrishna) ಪ್ರಶ್ನಿಸಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರವಾಗಿ ಸ್ವಾಮೀಜಿಗಳು ಧರ್ಮ ರಕ್ಷಣೆ ಮಾಡಬೇಕು, ರಾಜಕೀಯಕ್ಕೆ ಎಂಟ್ರಿ ಆಗಬಾರದು ಎಂಬ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯಿಸಿದ ಅವರು, ಇವರು ಸಿಎಂ ಆದಾಗಾ ಶ್ರೀಗಳ ಆಶೀರ್ವಾದ ಇರಲಿಲ್ವಾ? ಕುಮಾರಸ್ವಾಮಿ ಏನು ಸ್ವಯಂ ಘೋಷಿತ ದೇವಮಾನವರಾ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕೋಡಿಮಠಕ್ಕೆ ದಿಢೀರ್ ಭೇಟಿ ಕೊಟ್ಟ ಜಿ.ಪರಮೇಶ್ವರ್
ನಾನು ರಾಜಕೀಯಕ್ಕೆ ಹೊಸದಾಗಿ ಬಂದ ವೇಳೆ ಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಚೆನ್ನಾರೆಡ್ಡಿ ಆಯೋಗದ ವಿರುದ್ಧ ಹೋರಾಟ ಆಯ್ತು. ಆ ಹೋರಾಟ ಮಾಡಿದ್ದೇ ದೇವೇಗೌಡರ ಸಿಎಂ ಮಾಡಲು. ಆಗ ದೇವೇಗೌಡರು ಮುಖ್ಯಮಂತ್ರಿಯಾದರು. ಈಗ ಅದೇ ಶ್ರೀಗಳ ಬಗ್ಗೆ ಹೆಚ್‌ಡಿಕೆ ಚಿಲ್ಲರೆ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ: ಸಾಕು ನಾಯಿಯೊಂದಿಗೆ ಸಂಸತ್ತಿಗೆ ಬಂದ ʻಕೈʼ ಸಂಸದೆ – ಮೊದಲ ದಿನವೇ ವಿವಾದ
ಅಲ್ಲದೇ ನವೆಂಬರ್ ಕ್ರಾಂತಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಸದ್ಯ ಯಾವುದೇ ಕ್ರಾಂತಿ ಇಲ್ಲ, ನಾವೆಲ್ಲ 2028ರ ಹೋರಾಟಕ್ಕೆ ಸಿದ್ಧವಾಗುತ್ತಿದ್ದೇವೆ. ಸಿಎಂ-ಡಿಸಿಎಂ ನಡುವೆ ಏನು ಒಪ್ಪಂದ ಅನ್ನೋದರ ಬಗ್ಗೆ ನಾವ್ಯಾಕೆ ಬಹಿರಂಗವಾಗಿ ಹೇಳಬೇಕು. ಸಮಯ ಬಂದಾಗ ಎಲ್ಲಾ ಕುತೂಹಲವನ್ನು ತಣಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಜನರ ಅಗತ್ಯ ಸಮಸ್ಯೆಗಳನ್ನ ಚರ್ಚಿಸಲು ಅವಕಾಶ ಕೊಡದಿರುವುದು ನಾಟಕ – ಮೋದಿಗೆ ಪ್ರಿಯಾಂಕಾ ಗಾಂಧಿ ತಿರುಗೇಟು


