– ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದ ಪವಿತ್ರಾ ಗೌಡ; ಇಂದು ಬೇಲ್ ಭವಿಷ್ಯ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Case) ಎರಡನೇ ಬಾರಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್‌ಗೆ (Actor Darshan) ಇಂದು ಅದೃಷ್ಟ ಪರೀಕ್ಷೆ ದಿನ. ಪರಪ್ಪನ ಅಗ್ರಹಾರದಲ್ಲೇ ಉಳಿಯುತ್ತಾರಾ ಅಥವಾ ಬಳ್ಳಾರಿ ಜೈಲಿಗೆ (Ballary Jail) ಶಿಫ್ಟ್ ಆಗ್ತಾರಾ ಎಂಬುದು ಇಂದು ಕೋರ್ಟ್ನಲ್ಲಿ ನಿರ್ಧಾರ ಆಗಲಿದೆ. ಇತ್ತ, ಎ1 ಆರೋಪಿ ಪವಿತ್ರಗೌಡ (Pavitra Gowda) ಬೇಲ್ ಭವಿಷ್ಯ ಕೂಡ ನಿರ್ಧಾರವಾಗಲಿದೆ.
ಭದ್ರತಾ ದೃಷ್ಟಿಯಿಂದ ಬೆಂಗಳೂರು ಜೈಲಿನಿಂದ ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಬೇಕೆಂದು ಸರ್ಕಾರಿ ಪರ ವಕೀಲರು ಮಾಡಿರೋ ಮನವಿ ಅರ್ಜಿ ವಿಚಾರಣೆ ನಡೆಸಲಿದೆ. ಈಗಾಗಲೇ ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪಣೆ ಸಲ್ಲಿಕೆ ಮಾಡಿದ್ದು, ಟ್ರಯಲ್ ಅತೀ ಶೀಘ್ರದಲ್ಲೇ ಪ್ರಾರಂಭ ಆಗ್ತಾ ಇದೆ. ಹೀಗಾಗಿ, ಆರೋಪಿಯನ್ನು ಪದೇ ಪದೇ ಬಳ್ಳಾರಿಯಿಂದ ಕರೆತರಲು ಸಾಧ್ಯವಿಲ್ಲ. ಜೊತೆಗೆ ಆರೋಪಿ ತಾಯಿಗೆ ಕ್ಯಾನ್ಸರ್ ಮಾರಕ ಕಾಯಿಲೆ ಇದ್ದು, ಬಳ್ಳಾರಿಗೆ ಪ್ರಯಣ ಮಾಡಲು ಕಷ್ಟ. ಹೀಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇರಿಸುವಂತೆ ಮನವಿ ಮಾಡಿದೆ. ಇಂದು ವಾದ ಮಂಡನೆ ಮಾಡಲಿರೋ ಸರ್ಕಾರಿ ಪರ ವಕೀಲರು ಯಾವ ಅಂಶವನ್ನು ಮುಂದಿಡಲಿದ್ದಾರೆ ಎಂಬುದನ್ನು ನೋಡಬೇಕು. ಇದನ್ನೂ ಓದಿ: ಧರ್ಮಸ್ಥಳ ಕೇಸ್- ಮಾಸ್ಕ್ ಮ್ಯಾನ್ ಚಿನ್ನಯ್ಯ ಎಸ್‌ಐಟಿ ಕಸ್ಟಡಿ ನಾಳೆಗೆ ಅಂತ್ಯ
ಪವಿತ್ರಗೌಡಗೆ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿ ಜೈಲಿಗೆ ಕಳುಹಿಸಿದೆ. ಆದರೆ, ಜೈಲಿಗೆ ಹೋದ ನಾಲ್ಕನೇ ದಿನಕ್ಕೆ ಮತ್ತೆ ಸೆಷನ್ಸ್ ಕೋರ್ಟ್ ಜಾಮೀನಿಗೆ ಪವಿತ್ರಾ ಗೌಡ ಅರ್ಜಿ ಹಾಕಿದ್ದರು. ಬಿಎನ್‌ಎಸ್‌ಎಸ್ ಅಲ್ಲಿ ವಿಚಾರಣೆ ನಡೆಸೋ ಬದಲು ಸಿಆರ್‌ಪಿಸಿನಲ್ಲಿ ವಿಚಾರಣೆ ನಡೆಸ್ತಾ ಇದ್ದಾರೆ. ಹೀಗಾಗಿ ತಾಂತ್ರಿಕ ಕಾರಣಗಳಿಂದ ಜಾಮೀನು ಮಂಜೂರು ಮಾಡಬೇಕೆಂದು ಪವಿತ್ರಗೌಡ ಪರ ವಕೀಲರು ವಾದ ಮಂಡನೆ ಮಾಡಿದ್ರು. ಇತ್ತ ಸರ್ಕಾರಿ ಪರ ವಕೀಲರು ಕಾನೂನಿನ ಅವಕಾಶದ ಬಗ್ಗೆ ವಾದ ಮಂಡನೆ ಮಾಡಿದ್ದು, ವಾದ – ಪ್ರತಿವಾದ ಆಲಿಸಿರೋ ನ್ಯಾಯಾಲಯ ಇಂದಿಗೆ ಆದೇಶ ಕಾಯ್ದಿರಿಸಿದೆ. ಸುಪ್ರೀಂ ಕೋರ್ಟ್ನ ಶಾಕ್ ಬಳಿಕ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಇಂದು ಕೋರ್ಟ್ ಏನು ಆದೇಶ ನೀಡಲಿದೆ ಎಂದು ಕುತೂಹಲ ಮೂಡಿಸಿದೆ.