ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ (Renukaswamy Murder Case) ಬಂಧನವಾಗಿ ನಾಲ್ಕು ತಿಂಗಳಿನಿಂದ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ (Darshan) ಹೃದಯ ಲಬ್ ಡಬ್ ಲಬ್ ಡಬ್ ಬಡಿದುಕೊಳ್ಳಲು ಶುರುವಾಗಿದೆ. ಸೆರೆವಾಸದಿಂದ ಮುಕ್ತಿ ಸಿಗಬಹುದೆಂದು ನಿರೀಕ್ಷೆಯಲ್ಲಿರುವ ಆರೋಪಿ ದರ್ಶನ್‌ಗೆ ಮತ್ತೆ ಜೈಲಾ? ಬೆಲಾ? ಅನ್ನೋದು ನಿರ್ಧಾರ ವಾಗಲಿದೆ.
Advertisement
ಸೋಮವಾರ (ಅ.14) ಮಧ್ಯಾಹ್ನ ಸಿಸಿಹೆಚ್ 57 ಕೋರ್ಟ್ ಆರೋಪಿ ದರ್ಶನ್ ಜಾಮೀನು ಆದೇಶ ಪ್ರಕಟಿಸಲಿದೆ. ಪ್ರಕರಣದ ಎ2 ಆರೋಪಿಯಾಗಿರುವ ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡನೆ ಮಾಡಿದ್ದು ಪ್ರಕರಣದಲ್ಲಿ ದರ್ಶನ್ ಬಗ್ಗೆ ಪೂರಕವಾದ ಸಾಕ್ಷ್ಯಗಳು ಇಲ್ಲ. ಹಾಗಾಗಿ ದರ್ಶನ್‌ಗೆ ಜಾಮೀನು ಮಂಜೂರು ಮಾಡಬಹುದೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆದರೆ ಎಸ್‌ಪಿಪಿ ಪ್ರಸನ್ನ ಕುಮಾರ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ನೇರವಾಗಿ ಭಾಗಿಯಾಗಿದ್ದಾರೆ ಅನ್ನೋದಕ್ಕೆ ಹಲವು ಟೆಕ್ನಿಕಲ್ ಎವಿಡೆನ್ಸ್, ಸಿಸಿಟಿವಿ ದೃಶ್ಯಾವಳಿಗಳಿವೆ. ಎಫ್‌ಎಸ್‌ಎಲ್‌ನಲ್ಲಿ ದರ್ಶನ್ ಘಟನಾ ಸ್ಥಳದಲ್ಲಿ ಇದ್ದಿದ್ದರ ಸಾಕ್ಷ್ಯಗಳು ಲಭ್ಯವಾಗಿದೆ. ಇದನ್ನೂ ಓದಿ: ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ದಗಂಗಾ ಶ್ರೀಗಳ ಹೆಸರಿಡುವಂತೆ ಪ್ರಧಾನಿಗೆ ಸೋಮಣ್ಣ ಮನವಿ
Advertisement
Advertisement
ಆರೋಪಿ ದರ್ಶನ್ ಗೆ ಯಾವುದೇ ಕಾರಣಕ್ಕೂ ಜಾಮೀನು ಮಂಜೂರು ಮಾಡದಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾದ-ಪ್ರತಿವಾದ ಆಲಿಸಿರುವ ನ್ಯಾಯಾದೀಶರು ಆದೇಶ ಕಾಯ್ದರಿಸಿದ್ದರು ಸೋಮವಾರ ಜಾಮೀನು ಆದೇಶ ಹೊರ ಬಿಳುವುದಿಂದ ಎಲ್ಲರ ಚಿತ್ತ ಕೋರ್ಟ್ ಆದೇಶದತ್ತ ನೆಟ್ಟಿದೆ. ಇದನ್ನೂ ಓದಿ: T20 Women’s World Cup: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 9 ರನ್‌ಗಳ ಸೋಲು