ಬೆಂಗಳೂರು: ರಾಜಕೀಯ ಸೇರ್ಪಡೆ ಸುದ್ದಿ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದೇ ನಟ ದರ್ಶನ್ ಮೌನಕ್ಕೆ ಶರಣಾಗಿದ್ದಾರೆ.
ನಗರದಲ್ಲಿ `ಲೈಫ್ ಜೊತೆ ಒಂದು ಸೆಲ್ಫೀ’ ಚಿತ್ರದ ಮುಹೂರ್ತ ಕಾರ್ಯಕ್ರಮದದಲ್ಲಿ ದರ್ಶನ್ ಇಂದು ಪಾಲ್ಗೊಂಡಿದ್ದರು. ಈ ವೇಳೆ ಚಿತ್ರ ತಂಡಕ್ಕೆ ದರ್ಶನ್ ಶುಭಾಶಯ ಹೇಳಿದರು.
Advertisement
ಈ ಸಂದರ್ಭದಲ್ಲಿ ಮಾಧ್ಯಮಗಳು ರಾಜಕೀಯ ಸೇರ್ಪಡೆ ವಿಚಾರದ ಬಗ್ಗೆ ಪ್ರಶ್ನೆ ಕೇಳಲು ಸರ್ ಸರ್ ಎಂದು ಕರೆದಾಗ ದರ್ಶನ್ ಮೌನಕ್ಕೆ ಶರಣಾಗಿ ಮುಂದಕ್ಕೆ ಹೊರಟು ಹೋದರು.
Advertisement
ಮುಹೂರ್ತ ಕಾರ್ಯಕ್ರಮದಲ್ಲಿ ದರ್ಶನ್‍ತಾಯಿ ಮೀನ ತೂಗುದೀಪ್ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳ ಪ್ರಶ್ನೆಗೆ, ಸದ್ಯಕ್ಕೆ ರಾಜಕೀಯದ ಬಗ್ಗೆ ಪ್ರಸ್ತಾಪವಿಲ್ಲ. ಕಾಂಗ್ರೆಸ್ ಗೆ ಸೇರ್ಪಡೆಯಾಗುವ ವಿಚಾರವೂ ನಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದರು.
Advertisement
ಮಗನ ರಾಜಕೀಯ ಸೇರ್ಪಡೆಯ ಬಗ್ಗೆ ನಿಮ್ಮ ಇಚ್ಛೆ ಏನು ಎಂದು ಕೇಳಿದ್ದಕ್ಕೆ, ರಾಜಕೀಯಗೆ ಸೇರ್ಪಡೆಯಾಗುವುದು ಮಗನ ವೈಯಕ್ತಿಕ ವಿಚಾರ. ನನ್ನ ಇಚ್ಛೆ ಏನಿಲ್ಲ ಎಂದು ತಿಳಿಸಿದರು.
Advertisement
ದರ್ಶನ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಪ್ರತಿಕ್ರಿಯಿಸಿ, ನಟ ದರ್ಶನ್ ಜೊತೆ ಕಾಂಗ್ರೆಸ್‍ನ ಯಾವ ನಾಯಕರು ಚರ್ಚೆ ನಡೆಸಿಲ್ಲ. ದರ್ಶನ್ ಕಾಂಗ್ರೆಸ್ ಸೇರ್ಪಡೆ ವಿಚಾರದಲ್ಲಿ ನಾವ್ಯಾರು ಮಾತುಕತೆ ನಡೆಸಿಲ್ಲ. ದರ್ಶನ್ ಜೊತೆ ನಮ್ಮವರು ಮಾತುಕತೆ ನಡೆಸಿರೋದು ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.
ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ನಮ್ಮ ಪಕ್ಷದಲ್ಲಿದ್ದು, ಕೆಪಿಸಿಸಿ ಕಾರ್ಯದರ್ಶಿಯಾಗಿದ್ದಾರೆ. ತಾಯಿ ಜೊತೆ ಅವರು ರಾಜಕೀಯದಲ್ಲಿ ಗುರುತಿಸಿಕೊಂಡರೆ ನಮಗೂ ಖುಷಿ. ದರ್ಶನ್ ಕಾಂಗ್ರೆಸ್ ಸೇರ್ಪಡೆಯಾದ್ರೆ ನಮಗೂ ಸಂತೋಷ ಎಂದು ಹೇಳಿದರು.
ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜಕೀಯಕ್ಕೆ?
Will Darshan join Congress? Mother Meena Thoogudeepa recation: https://t.co/09SBk8R2tk via @YouTube
— PublicTV (@publictvnews) August 31, 2017
Challenging Star Darshan rection on Joining Politics: https://t.co/gYMC7WyGQ3 via @YouTube
— PublicTV (@publictvnews) August 31, 2017
ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜಕೀಯಕ್ಕೆ? https://t.co/afEQgViFp9 #Challengingstar #Politics @dasadarshan @DarshanFanz @Dcompany171 pic.twitter.com/HfX3NT6hIi
— PublicTV (@publictvnews) August 31, 2017