ಮೆಲ್ಬರ್ನ್: ಟಿ20 ವಿಶ್ವಕಪ್ (T20 WorldCup 2022) ಚುಟುಕು ಪಂದ್ಯಾವಳಿ ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲೇ ಭಾರತ (Team India) ಪಾಕಿಸ್ತಾನದ (Pakistan) ವಿರುದ್ಧ ರೋಚಕ ಜಯ ಸಾಧಿಸಿದೆ.
https://twitter.com/dazzlers_ss/status/1584159515574145025?ref_src=twsrc%5Etfw%7Ctwcamp%5Etweetembed%7Ctwterm%5E1584159515574145025%7Ctwgr%5E119503e145b4951ba5c60991a291e0af8b8614b1%7Ctwcon%5Es1_&ref_url=https%3A%2F%2Ftv9kannada.com%2Fsports%2Fcricket-news%2Ft20-world-cup-2022-virat-kohli-breaks-into-tears-after-ind-beat-pak-at-mcg-zp-au50-459467.html
ಈ ರೋಚಕ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿ (Virat Kohli) ಸಂಭ್ರಮಿಸುತ್ತಲೇ ಭಾವುಕರಾದರು. ಭಾರತ ತಂಡಕ್ಕೆ ಗೆಲುವು ತಂದುಕೊಟ್ಟ ಖುಷಿಯಲ್ಲೇ ಕಣ್ಣೀರು ಹಾಕಿದರು. ಇತ್ತ ಕಿಂಗ್ ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ (Hardik Pandya) ಕೂಡ ಮೈದಾನಕ್ಕೆ ಓಡಿ ಬಂದು ಕೊಹ್ಲಿ ಭಾವುಕತೆಯಲ್ಲಿ ಪಾಲುದಾರರಾದರು. ಇದನ್ನೂ ಓದಿ: ದೀಪಾವಳಿ ಶುರು – ಪಾಕ್ ವಿರುದ್ಧ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಹೊಂಬಾಳೆ ಫಿಲ್ಮ್ಸ್, ಅಮಿತ್ ಶಾ ಮೆಚ್ಚುಗೆ
ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ ಅಚ್ಚರಿ ಹೇಳಿಕೆಗಳನ್ನೂ ನೀಡಿದ್ದಾರೆ. ಈ ಗೆಲವು ಹೇಗೆ ಸಂಭವಿಸಿತು ಅನ್ನೋದೆ ನನಗೆ ಅಚ್ಚರಿಯಾಗಿದೆ. ಹಾರ್ದಿಕ್ ಪಾಂಡ್ಯ ಗೇಮ್ ಮಧ್ಯದಲ್ಲಿ ನನ್ನನ್ನು ನಂಬಿ, ಕೊನೆಯವರೆಗೂ ಇರಿ ಎಂದು ಹೇಳುತ್ತಲೇ ಇದ್ದರು. ಅದನ್ನು ನಾನೆಂದಿಗೂ ಮರೆಯೋದಿಲ್ಲ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಕೊಹ್ಲಿ, ಪಾಂಡ್ಯ ಪಂಚ್‍ಗೆ ಪಾಕ್ ಪಂಚರ್ – ಶುಭಾರಂಭ ಕಂಡ ಭಾರತ
ನನ್ನ ಕೆರಿಯರ್‌ನ ಬೆಸ್ಟ್ ಇನ್ನಿಂಗ್ಸ್:
ಮುಂದುವರಿದು ಮಾತನಾಡಿದ ಕಿಂಗ್ ಕೊಹ್ಲಿ, ಇಲ್ಲಿವರೆಗೆ ನಾನು 2016ರ ಟಿ20 ವಿಶ್ವಕಪ್‌ನಲ್ಲಿ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದ ಇನ್ನಿಂಗ್ಸ್ ಕೆರಿಯರ್ ಬೆಸ್ಟ್ ಇನ್ನಿಂಗ್ಸ್ ಆಗಿತ್ತು. ಆ ಪಂದ್ಯದಲ್ಲಿ ನಾನು 52 ಎಸೆತಗಳಲ್ಲಿ 82 ರನ್ ಗಳಿಸಿದ್ದೆ. ಇಂದು ನಾನು 53 ಎಸೆತಗಳಲ್ಲಿ 82 ರನ್ ಗಳಿಸಿದ್ದೇನೆ. ಇದು ನನ್ನ ಕೆರಿಯರ್‌ನ ಬೆಸ್ಟ್ ಇನ್ನಿಂಗ್ಸ್ ಆಗಿದೆ. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಸೂಪರ್; `ಕಾಂತಾರ’ ಸಿನಿಮಾಗೆ ಇಂಡೋ-ಪಾಕ್ ಕದನ ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೆಂಡ್
ಕೊಹ್ಲಿನ ಹೊತ್ಕೊಂಡು ಕುಣಿದ ಹಿಟ್‌ಮ್ಯಾನ್:
ಕೊನೆಯ ಎಸೆತದಲ್ಲಿ ಅಶ್ವಿನ್ ಸಿಂಗಲ್ ಕದಿಯುವಲ್ಲಿ ಯಶಸ್ವಿಯಾದ ಬಳಿಕ ಅಕ್ಷರಶಃ ಗದ್ಗದಿತರಾದ ಕೊಹ್ಲಿ ಭಾವುಕರಾದರು. ಅದೇ ಸಮಯಕ್ಕೆ ಮೈದಾನಕ್ಕಿಳಿದ ರೋಹಿತ್ ಶರ್ಮಾ (Rohit Sharma), ಕೊಹ್ಲಿಯನ್ನು ತಬ್ಬಿಕೊಂಡು ಅಭಿನಂದನೆ ಸಲ್ಲಿಸಿದರು. ಇಷ್ಟಕ್ಕೆ ಸುಮ್ಮನಾಗದ ಹಿಟ್‌ಮ್ಯಾನ್, ಮಗುವಿನಂತೆ ಕೊಹ್ಲಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿದಾಡಿದರು.
ಟಿ20 ವಿಶ್ವಕಪ್ ಆರಂಭವಾಗಿದ್ದು, ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದ್ದ ಪಾಕ್ ತಂಡ ಟೀಂ ಇಂಡಿಯಾಕ್ಕೆ 160 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಗೆಲುವು ಸಾಧಿಸಿತು.