ಬೆಂಗಳೂರು: ಮುಡಾ (MUDA) ಜಟಾಪಟಿ ಮಧ್ಯೆ ಕಾಂಗ್ರೆಸ್ ಸಚಿವರು (Congress Ministers) ಮತ್ತು ಶಾಸಕರು (MLA’s) ಗೌಪ್ಯ ಸಭೆ (Secret Meeting) ನಡೆಸಲು ಆರಂಭಿಸಿದ್ದಾರೆ. ಈ ಎಲ್ಲಾ ಸಭೆಗಳಿಗೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದ್ದು ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ನೇರವಾಗಿಯೇ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಲು ಆರಂಭಿಸಿದ್ದಾರೆ.
ಖರ್ಗೆ ಅವರು ಗುಪ್ತವಾಗಿ ಸಭೆ ನಡೆಸಿದ ನಾಯಕರ ಜೊತೆ ಸಭೆ ನಡೆಸಿ ಹೈಕಮಾಂಡ್‌ಗೆ ವರದಿ ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು| ರಾತ್ರಿ ಸುರಿದ ಮಳೆಗೆ ಅಪಾರ್ಟ್‌ಮೆಂಟ್ ಜಲಾವೃತ – ಟ್ರಾಕ್ಟರ್, ಟೆಂಪೋ ಮೂಲಕ ಜನರ ಸ್ಥಳಾಂತರ
ಯಾವ ದಿನ ಯಾರ ಸಭೆ?
* ಆ.20 – ಬೆಂಗಳೂರಿನಲ್ಲಿ ಡಿಕೆಶಿಯನ್ನು ಭೇಟಿಯಾಗಿ ಸತೀಶ್ ಜಾರಕಿಹೊಳಿ ಮಾತುಕತೆ
* ಆ.30 – ಸತೀಶ್ ಜಾರಕಿಹೊಳಿ ನಿವಾಸಕ್ಕೆ ಪರಮೇಶ್ವರ್ ಮೊದಲ ಭೇಟಿ
* ಸೆ.02 – ಸತೀಶ್ ಜಾರಕಿಹೊಳಿ ನಿವಾಸಕ್ಕೆ ಪರಮೇಶ್ವರ್ ಎರಡನೇ ಭೇಟಿ
* ಸೆ. 03 – ಸತೀಶ್ ಜಾರಕಿಹೊಳಿ ದೆಹಲಿ ಭೇಟಿ
* ಸೆ. 07 – ಎಂ.ಬಿ ಪಾಟೀಲ್ ನಿವಾಸದಲ್ಲಿ ಪರಂಮೇಶ್ವರ್ ಭೇಟಿ, ಬ್ರೇಕ್‌ಫಾಸ್ಟ್
* ಸೆ. 30 – ಪರಮೇಶ್ವರ್ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಭೇಟಿ
* ಅ.03 – ಪರಮೇಶ್ವರ್-ಜಾರಕಿಹೊಳಿ-ಮಹಾದೇವಪ್ಪ ಸಭೆ
* ಅ.04 – ದೆಹಲಿಯಲ್ಲಿ ಖರ್ಗೆಯನ್ನು ಭೇಟಿ ಮಾಡಿದ ಜಾರಕಿಹೊಳಿ
* ಅ.06 – ತುಮಕೂರಿನಲ್ಲಿ ಪರಮೇಶ್ವರ್-ಜಾರಕಿಹೊಳಿ ಭೇಟಿ
* ಅ.06 – ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿ ಮಾಡಿದ ಡಿಕೆಶಿ ಇದನ್ನೂ ಓದಿ: ಹೆಲಿಕಾಪ್ಟರ್‌ನಲ್ಲಿ ಬಂದು ಮುಡಾ ಕಡತ ತೆಗೆದುಕೊಂಡು ಹೋಗಿದ್ದಾರೆ: ಬೈರತಿ ವಿರುದ್ಧ ದೂರು