ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Election) ಹತ್ತಿರವಾಗುತ್ತಿದ್ದು, ಚುನಾವಣಾ ಕಣ ರಂಗೇರಿದೆ. ಮೂರು ಪಕ್ಷಗಳು ಅಧಿಕಾರದ ಗದ್ದುಗೆ ಏರಲು ನಾನಾ ರಣತಂತ್ರ ಹೆಣೆಯುತ್ತಿವೆ. ಇದೀಗ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರನ್ನ ಸೋಲಿಸೋಕೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಪ್ರಯೋಗಿಸಿರೋ ಅಸ್ತ್ರಕ್ಕೆ ಹೈಕಮಾಂಡ್ ಒಪ್ಪುತ್ತಾ…? ಅನ್ನೋ ಪ್ರಶ್ನೆ ಎದ್ದಿದೆ.
Advertisement
ಹೌದು, ಚನ್ನಪಟ್ಟಣದಲ್ಲಿ (Channapatna) ಹೆಚ್‌ಡಿಕೆ ವಿರುದ್ಧ ಮೋಹಕ ತಾರೆ ರಮ್ಯಾ ಸ್ಪರ್ಧೆ ಬಗ್ಗೆ ಸಿದ್ದರಾಮಯ್ಯ ಅಂಡ್ ಟೀಂ ಪ್ರಸ್ತಾಪಕ್ಕೆ ಹೈಕಮಾಂಡ್ ಒಪ್ಪುತ್ತಾ ಅನ್ನೋ ಪ್ರಶ್ನೆ ಕೈ ಪಾಳಕ್ಕೆ ಕಾಡ್ತಿದೆ. ಇದನ್ನೂ ಓದಿ: LTTE ಮುಖ್ಯಸ್ಥ ಪ್ರಭಾಕರನ್ ಇನ್ನೂ ಜೀವಂತ: ಇಂದಿರಾ ಆಪ್ತ, ತಮಿಳು ನಾಯಕ ಸ್ಫೋಟಕ ಹೇಳಿಕೆ
Advertisement
Advertisement
ಕಾಂಗ್ರೆಸ್ (Congress) ಸದ್ಯ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕಾದ್ರೆ ಹಳೆ ಮೈಸೂರು (Old Mysuru) ಭಾಗದಲ್ಲಿ ಜೆಡಿಎಸ್ (JDS) ಮಣಿಸಿ ದೊಡ್ಡ ಮಟ್ಟದಲ್ಲಿ ಜಯಭೇರಿ ಭಾರಿಸಬೇಕು. ಅದಕ್ಕೆ ಮಂಡ್ಯ, ರಾಮನಗರದಂತಹ ಭದ್ರ ಕೋಟೆಯಲ್ಲಿ ಜೆಡಿಎಸ್ ಮಣಿಸಬೇಕು. ಹಾಗಾದ್ರೆ ಮಾತ್ರ ಕಾಂಗ್ರೆಸ್‌ಗೆ ಗೆಲುವು ಸುಲಭವಾಗುತ್ತದೆ. ರಮ್ಯಾ ಅವರನ್ನ ಚನ್ನಪಟ್ಟಣದಿಂದ ಕಣಕ್ಕಿಳಿಸಿದರೆ ಪಕ್ಷಕ್ಕೆ ಅನುಕೂಲವಾಗಲಿದೆ. ಇದು ಮಂಡ್ಯದ ಮೇಲೂ ಪರಿಣಾಮ ಬೀರಲಿದೆ ಅನ್ನೋದು ಸಿದ್ದರಾಮಯ್ಯ ವಾದ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬಡವರು ಬಡವರಾಗೇ ಇರ‍್ಲಿ, ಶ್ರೀಮಂತರಾದ್ರೆ ಐಟಿ, ಇಡಿ, ಸಿಬಿಐ ಸಂಕಷ್ಟ : ಕೆಜಿಎಫ್ ಬಾಬು
Advertisement
ತ್ರಿಕೋನ ಸ್ಪರ್ಧೆಯಲ್ಲಿ ರಮ್ಯಾ ಗೆಲುವಿಗೆ ಅವಕಾಶ ಜಾಸ್ತಿ ಇರಲಿದೆ. ಮುಖ್ಯವಾಗಿ ಕುಮಾರಸ್ವಾಮಿ ಅವರನ್ನ ರಾಮನಗರ ಜಿಲ್ಲೆಯಲ್ಲಿ ಕಟ್ಟಿ ಹಾಕಬಹುದು. ಇದು ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಇಟ್ಟ ಗೆಲುವಿನ ಫಾರ್ಮುಲಾ ಎನ್ನಲಾಗಿದೆ. ಆದರೆ ಇದಕ್ಕೆ ಹೈಕಮಾಂಡ್ ಹಾಗೂ ಕೆಪಿಸಿಸಿ ಅಧ್ಯಕ್ಷರು ಒಪ್ಪುತ್ತಾರಾ ಅನ್ನೋ ಪ್ರಶ್ನೆ ಕಾಡ್ತಿದ್ದು, ಕಾಂಗ್ರೆಸ್ ನಡೆ ಕುತೂಹಲ ಕೆರಳಿಸಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k