ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ದೋಸ್ತಿ ಸರ್ಕಾರ 24 ಗಂಟೆಗಳಲ್ಲೇ ಪತನವಾಗಲಿದ್ದು, ನಂತರ ಒಂದು ವಾರದಲ್ಲಿ ಬಿಜೆಪಿ ಹೊಸ ಸರ್ಕಾರವನ್ನು ರಚಿಸುತ್ತದೆ ಎಂದು ಬಿಜೆಪಿ ಶಾಸಕ ಉಮೇಶ್ ಕತ್ತಿ ಬೆಳಗಾವಿಯಲ್ಲಿ ಭವಿಷ್ಯ ನುಡಿದಿದ್ದು, ಇಂದು ಮಧ್ಯಾಹ್ನ 1.30ಕ್ಕೆ ಕುಮಾರಸ್ವಾಮಿ ಸರ್ಕಾರ ಬೀಳುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ಕತ್ತಿ ಹೇಳಿದ ಡೆಡ್‍ಲೈನ್ ಮುಗಿಯಲು ಇನ್ನು ಕೆಲವೇ ಗಂಟೆ ಮಾತ್ರ ಬಾಕಿ ಇದ್ದು, ಕತ್ತಿ ಬಾಂಬ್ ಠುಸ್ ಆಗುತ್ತಾ ಅಥವಾ ಸರ್ಕಾರ ಪತನವಾಗುತ್ತಾ ಅನ್ನೋದು ತಿಳಿದುಬರಲಿದೆ.
Advertisement
Advertisement
ಬೆಳಗಾವಿಯಲ್ಲಿ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆಗಮಿಸಿದ ಉಮೇಶ್ ಕತ್ತಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಕಾಂಗ್ರೆಸ್ಸಿನ 15 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಯಾವುದೇ ಶಾಸಕರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ. ಇನ್ನು 24 ಗಂಟೆಗಳಲ್ಲೆ ದೋಸ್ತಿ ಸರ್ಕಾರ ಪತನವಾಗಲಿದೆ. ಅಲ್ಲದೇ ಮುಂಬರುವ ಒಂದು ವಾರದಲ್ಲೇ ಬಿಜೆಪಿ ರಾಜ್ಯದಲ್ಲಿ ಹೊಸ ಸರ್ಕಾರ ರಚಿಸುತ್ತದೆಂದು ವಿಶ್ವಾಸ ವ್ಯಕ್ತಪಡಿಸಿದ್ದರು.
Advertisement
ಇವರೆಲ್ಲಾ ಬಿಜೆಪಿ ಸೇರ್ತಾರಾ….?
1. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಎಸ್ ಟಿ ಸಮುದಾಯದವಾರಾಗಿದ್ದು, 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
2. ಬಳ್ಳಾರಿ ಗ್ರಾಮಾಂತರ ಶಾಸಕರಾಗಿರುವ ನಾಗೇಂದ್ರ ಇವರು ಕೂಡ ಎಸ್ ಟಿ ಸಮುದಾಯದವರಾಗಿದ್ದು, 3 ಬಾರಿ ಶಾಸಕರಾಗಿದ್ದಾರೆ.
3. ಕಂಪ್ಲಿ ಶಾಸಕರಾಗಿರುವ ಗಣೇಶ್ ಅವರು ಎಸ್‍ಟಿ ಸಮುದಾಯದವರಾಗಿದ್ದು, ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
4. ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಅವರು ಎಸ್‍ಸಿ/ಲಂಬಾಣಿ ಸಮುದಾಯದವರಾಗಿದ್ದು, 2 ಬಾರಿ ಶಾಸಕರಾಗಿದ್ದಾರೆ.
5. ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್ ಅವರು ಲಿಂಗಾಯತ ಸಮುದಾಯದವರಾಗಿದ್ದು, 3 ಬಾರಿ ಶಾಸಕರಕಾಗಿ ಆಯ್ಕೆಯಾಗಿದ್ದಾರೆ.
6. ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಅವರು ಬ್ರಾಹ್ಮಣರಾಗಿದ್ದು, 2 ಬಾರಿ ಶಾಸಕರಾಗಿದ್ದಾರೆ.
Advertisement
7. ಹೊಸಪೇಟೆ ಶಾಸಕ ಆನಂದ್‍ಸಿಂಗ್ ಅವರು ಒಬಿಸಿಯಾಗಿದ್ದು, 3 ಬಾರಿ ಶಾಸಕ ಸ್ಥಾನವನ್ನು ಅಲಂಕರಿಸಿದ್ದಾರೆ.
8. ಭದ್ರಾವತಿ ಶಾಸಕ ಸಂಗಮೇಶ್ ಲಿಂಗಾಯತ ಸಮುದಾಯದವರಾಗಿದ್ದು, 2 ಬಾರಿ ಶಾಸಕರಾಗಿದ್ದಾರೆ.
9. ರಾಯಚೂರು ಗ್ರಾಮೀಣ ಶಾಸಕರಾಗಿರುವ ಬಸವರಾಜ್ ದದ್ದಲ್ ಅವರು ಎಸ್‍ಟಿ ಸಮುದಾಯದವರಾಗಿದ್ದು ಮೊದಲ ಬಾರಿ ಶಾಸಕರಾಗಿದ್ದಾರೆ.
10. ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಕೂಡ ಎಸ್‍ಟಿ ಸಮುದಾಯದವರಾಗಿದ್ದು, 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
11. ಅಥಣಿ ಶಾಸಕ ಮಹೇಶ್ ಕಮಟಳ್ಳಿ ಅವರು ಲಿಂಗಾಯತ ಸಮುದಾಯದವರಾಗಿದ್ದು, ಮೊದಲ ಬಾರಿ ಶಾಸಕರಾಗಿದ್ದಾರೆ.
12. ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರು ಕೂಡ ಲಿಂಗಾಯತ ಸಮುದಾಯದವರಾಗಿದ್ದು, ಮೊದಲ ಬಾರಿಯ ಶಾಸಕರಾಗಿದ್ದಾರೆ. ಇವರೆಲ್ಲರೂ ಬಿಜೆಪಿ ಸೇರುವ ಸಾಧ್ಯತೆಗಳಿವೆ.
ಶಾಸಕ ಉಮೇಶ್ ಕತ್ತಿ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ..
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv