ಹಿಂದೂ ಹೆಣ್ಣುಮಕ್ಕಳನ್ನು ಅವಮಾನಿಸಿದ್ರೆ ಕೈ ಕತ್ತರಿಸುತ್ತೇವೆ – ಕೇಂದ್ರ ಸಚಿವ ಚೌಬೆ ವಿವಾದಾತ್ಮಕ ಹೇಳಿಕೆ

Public TV
1 Min Read
ashwini choubey

ಪಾಟ್ನಾ: ನಮ್ಮ ಹಿಂದೂ ಸಮುದಾಯದ ಹೆಣ್ಣುಮಕ್ಕಳನ್ನು ಅವಮಾನಿಸಿದರೆ, ಅವರ ಕೈ ಕತ್ತರಿಸಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್‌ ಚೌಬೆ (Ashwini Kumar Choubey) ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ.

ಸನಾತನ ಧರ್ಮದ ಹೆಣ್ಣುಮಕ್ಕಳು ಭಾರತದ ಮಕ್ಕಳಿದ್ದಂತೆ. ಹಿಂದೂ ಹೆಣ್ಣುಮಕ್ಕಳ ಘನತೆಯ ಜೊತೆ ಚೆಲ್ಲಾಟವಾಡುವವರ ಕೈ ಕತ್ತರಿಸುತ್ತೇವೆ. ಆರ್‌ಜೆಡಿ ನಾಯಕರು ತಮ್ಮ ಹೆಣ್ಣುಮಕ್ಕಳನ್ನು ಮುಸ್ಲಿಮರಿಗೆ ಮದುವೆ ಮಾಡಿಕೊಡಬಹುದು ಎಂದು ನಂಬಿದ್ದರೆ, ಅದು ಅವರ ಸ್ವಾತಂತ್ರ್ಯ. ಆದರೆ ಭಾರತವು ಹಿಂದೂ ರಾಷ್ಟ್ರವಾಗಿದೆ. ಅದು ಹಾಗೆಯೇ ಉಳಿಯುತ್ತದೆ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೇಳಿಕೆ – ವಿವರ ಪಡೆಯಲು ರಾಗಾ ಮನೆಗೆ ಆಗಮಿಸಿದ ಪೊಲೀಸರು

ashwini kumar choubey

ಯಾವುದೇ ಮುಸ್ಲಿಂ ಯುವಕ ಹಿಂದೂ ಸಮುದಾಯದ ಮಗಳನ್ನು ಅಪಹರಿಸಿದರೆ ಅದಕ್ಕೆ ಬಿಜೆಪಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾಲವೇ ಹೇಳುತ್ತದೆ. ಹಿಂದೂ ಸಮುದಾಯದ ಸ್ವಾಭಿಮಾನ ಮತ್ತು ಹೆಮ್ಮೆಗಾಗಿ ಬಿಜೆಪಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಮತ್ತು ನಾಯಕರು ಯಾರ ಕತ್ತು ಸೀಳಲು ಸಿದ್ಧರಾಗಿದ್ದಾರೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಬಿಜೆಪಿ ನಾಯಕರು ತಮ್ಮ ಹೆಣ್ಣುಮಕ್ಕಳನ್ನು ಮುಸ್ಲಿಮರಿಗೆ ಮದುವೆ ಮಾಡುವ ಬದಲು ಮುಸ್ಲಿಮರಿಂದ ರಕ್ಷಿಸಬೇಕು ಎಂದು ಹೇಳಿದ್ದ ಆರ್‌ಜೆಡಿಯ ಭಾಯಿ ವೀರೇಂದ್ರ ಅವರಿಗೆ ಚೌಬೆ ಟಾಂಗ್‌ ಕೊಟ್ಟಿದ್ದಾರೆ. ವೀರೇಂದ್ರ ಹೇಳಿಕೆಗೆ ಬಿಜೆಪಿ ಎಂಎಲ್‌ಸಿ ಸಂತೋಷ್ ಸಿಂಗ್ ಕೂಡ ತಿರುಗೇಟು ನೀಡಿದ್ದರು. ಆರ್‌ಜೆಡಿ ನಾಯಕರು ಮಾನಸಿಕವಾಗಿ ದಿವಾಳಿಯಾಗಿದ್ದಾರೆ. ಹಿಂದೂ ಹೆಣ್ಣುಮಕ್ಕಳನ್ನು ತಪ್ಪು ಉದ್ದೇಶದಿಂದ ನೋಡುವ ಯಾವುದೇ ಮುಸ್ಲಿಂ ಯುವಕನ ಬೆರಳುಗಳನ್ನು ಕತ್ತರಿಸುತ್ತೇನೆ ಎಂದು ಅವರು ನೇರವಾಗಿ ಸಮುದಾಯವೊಂದನ್ನು ಗುರಿಯಾಗಿಸಿ ವಿವಾದಿತ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ದೆಹಲಿ ಮೆಟ್ರೋ ಸೈಟ್ ಬಳಿ ಚೀಲದಲ್ಲಿತ್ತು ಮಹಿಳೆಯ ತಲೆ, ದೇಹದ ಇತರ ಭಾಗಗಳು

Share This Article
Leave a Comment

Leave a Reply

Your email address will not be published. Required fields are marked *