ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಗೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡುವಂತೆ ಒತ್ತಾಯಿಸುತ್ತಿರುವವರ ಮೊಣಕಾಲು ಮುರಿಯುವುದಾಗಿ ಬೆದರಿಕೆ ಹಾಕುವ ಮೂಲಕ ತೃಣಮೂಲ ಕಾಂಗ್ರೆಸ್ ಶಾಸಕ ಉದಯನ್ ಗುಹಾ ಅವರು ವಿವಾದಕ್ಕೀಡಾಗಿದ್ದಾರೆ.
Advertisement
ತೂಫಂಗಂಜ್ ಪುರಸಭೆಯಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಯ ಪರ ಶುಕ್ರವಾರ ಪ್ರಚಾರ ನಡೆಸುವ ವೇಳೆ ಮಾತನಾಡಿದ ಅವರು, ಟಿಎಂಸಿ ಕಾರ್ಯಕರ್ತರ ಮೇಲೆ “ದೌರ್ಜನ್ಯ” ನಡೆಸಿದರೆ ಬಿಜೆಪಿ ನಾಯಕರ ಸ್ನಾಯುಗಳನ್ನು ಮುರಿದು ಕಳುಹಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ತುಂಗಾಭದ್ರಾ ಆರತಿಯಿಂದ ಹರಿಹರದ ಗತವೈಭವ ಮರಳಿ ಪಡೆಯುವ ಗುರಿ: ವಚನಾನಂದ ಸ್ವಾಮೀಜಿ
Advertisement
Advertisement
ಪ್ರತ್ಯೇಕ ಕೂಚ್ ಬೆಹಾರ್ ರಾಜ್ಯದ ಬೇಡಿಕೆಯನ್ನು ಯಾರಾದರೂ ಎತ್ತಿದರೆ, ಅವರ ಮೊಣಕಾಲು ಹಾಗೇ ಇರುವುದಿಲ್ಲ. ಯಾರಾದರೂ ಕೂಚ್ ಬೆಹಾರ್ ರಾಜ್ಯತ್ವವನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿದರೆ, ನಾವು ಆ ವ್ಯಕ್ತಿಯ ಮೊಣಕಾಲು ಮುರಿಯುತ್ತೇವೆ ಎಂದಿದ್ದಾರೆ.
Advertisement
ಉದಯನ್ ಗುಹಾ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕಿ ಮಾಲತಿ ರಾವಾ ಅವರು, ಉದಯನ್ ಗುಹಾಗೆ ನನ್ನ ಕಾಲು ಮುರಿಯುವ ಧೈರ್ಯವಿದೆ. ಶೀಘ್ರದಲ್ಲೇ ನಾವು ಅವರ ಕ್ಷೇತ್ರದಲ್ಲಿ ರ್‍ಯಾಲಿ ನಡೆಸುತ್ತೇವೆ. ಯಾರು ಯಾರ ಕೈಕಾಲು ಮುರಿಯುತ್ತಾರೆ ಎಂಬುದನ್ನು ನೋಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜಕೀಯಕ್ಕೆ ಬರ್ತಾರಾ ನಿರ್ದೇಶಕ ಪ್ರೇಮ್..?