‘ಪುಷ್ಪ’ ಸಿನಿಮಾ ಪಾರ್ಟ್ 10ರವರೆಗೆ ಬರಲಿದ್ಯಾ?: ಸುಳಿವು ಕೊಟ್ಟ ಮ್ಯೂಸಿಕ್ ಡೈರೆಕ್ಟರ್

Public TV
1 Min Read
allu arjun

ಬೆಂಗಳೂರಿನಲ್ಲಿ ನಡೆಯುತ್ತಿರುವ ಫಿಲ್ಮ್ ಫೆಸ್ಟಿವಲ್‌ಗೆ ‘ಪುಷ್ಪ’ ಡೈರೆಕ್ಟರ್ ದೇವಿಶ್ರೀ ಪ್ರಸಾದ್ (Devi Sri Prasad) ಆಗಮಿಸಿ ಕನ್ನಡ ಚಿತ್ರರಂಗದ ಬಗ್ಗೆ ಕೊಂಡಾಡಿದ್ದಾರೆ. ಈ ವೇಳೆ, ‘ಪುಷ್ಪ’ ಸಿನಿಮಾ ಪಾರ್ಟ್ 10ರವರೆಗೆ ಬರಬಹುದು ಎಂದು ಸಂಗೀತ ನಿರ್ದೇಶಕ ಸಿನಿಮಾ ಬಗ್ಗೆ ಸುಳಿವು ನೀಡಿದ್ದಾರೆ.

devi sri prasad

ಎಲ್ಲಾ ಕನ್ನಡಿಗರಿಗೂ ನಾನು ಥ್ಯಾಂಕ್ಸ್ ಹೇಳ್ತೀನಿ. ಯಾಕಂದ್ರೆ ತೆಲುಗು ಸಿನಿಮಾಗಳಿಗೆ ಕನ್ನಡದವರು ತುಂಬಾ ಸಪೋರ್ಟ್ ಮಾಡಿದ್ದೀರಾ. ನನ್ನ ಸಿನಿಮಾಗಳ ಹಾಡುಗಳಿಗೆ ನೀವು ತುಂಬಾ ಬೆಂಬಲಿಸಿದ್ರಿ. ಫಿಲ್ಮ್ ಫೆಸ್ಟಿವಲ್‌ಗೆ ಬಂದಿರೋದಕ್ಕೆ ನನಗೆ ತುಂಬಾ ಖುಷಿ ಆಗ್ತಿದೆ. ಕನ್ನಡ ಇಂಡಷ್ಟ್ರೀಯಲ್ಲಿ ಒಂದಷ್ಟು ಟೆಕ್ನಿಷಿಯನ್ಸ್ ನನಗೆ ತುಂಬಾ ಪರಿಚಯವಿದ್ದಾರೆ. ಈಗ ಕನ್ನಡ ಇಂಡಸ್ಟ್ರೀ ಪ್ಯಾನ್ ಇಂಡಿಯಾ ಲೆವೆಲ್‌ಗೆ ಬಂದಿದೆ. ಕಾಂತಾರ, ಕೆಜಿಎಫ್ ಸಿನಿಮಾ ಮೂಲಕ ಹೆಸರು ಮಾಡಿವೆ. ಈಗ ತೆಲಗು, ಕನ್ನಡ, ಮಲಯಾಳಂ ಅನ್ನೋದೆಲ್ಲ ಇಲ್ಲ. ಭಾರತೀಯ ಸಿನಿಮಾ ಅನ್ನೋ ಥರಾ ಆಗಿದೆ.

Allu Arjun Pushpa 2

ಇನ್ನೂ ಇದೇ ತಿಂಗಳು ಬೆಂಗಳೂರಿನಲ್ಲಿ ನನ್ನ ಲೈವ್ ಕಾನ್ಸರ್ಟ್ ಮಾಡ್ತಿದ್ದೀನಿ. ನಾವು ಬೆಂಗಳೂರಿಗೆ ಬರುತ್ತೇವೆ. ನೀವು ಚೆನ್ನೈ, ಹೈದ್ರಾಬಾದ್‌ಗೆ ಬನ್ನಿ. ನೀವು ಸಿನಿಮಾಗಳನ್ನ ಸೆಲೆಬ್ರೇಟ್ ಮಾಡಿ ನಾವೂ ಸೆಲೆಬ್ರೇಟ್ ಮಾಡ್ತೀವಿ ಎಂದರು.

ಇನ್ನೂ ‘ಪುಷ್ಪ’ ಸಿನಿಮಾ ಬಾಂಡ್ ಸಿರೀಸ್ ಥರ ಬರುತ್ತಾ? ಎಂದು ಎದುರಾದ ಪ್ರಶ್ನೆ ದೇವಿಶ್ರೀ ಮಾತನಾಡಿ, ‘ಪುಷ್ಪ’ ಚಿತ್ರ ಬಾಂಡ್ ಸಿರೀಸ್ ಸಿನಿಮಾ ಥರ ‘ಪುಷ್ಪ ಪಾರ್ಟ್ 10ರ’ವರೆಗೂ ಬರಬಹುದು. ಸದ್ಯಕ್ಕೆ ಸ್ವಲ್ಪ ರೆಸ್ಟ್‌ನಲ್ಲಿದ್ದೀವಿ. ಡೈರೆಕ್ಟರ್ ಸುಕುಮಾರ್ ಸರ್ ಮತ್ತು ಅಲ್ಲು ಅರ್ಜುನ್ ಸ್ವಲ್ಪ ವಿಶ್ರಾಂತಿ ಪಡೆಯುತ್ತಿದ್ದಾರೆ. ಮುಂದೆ ಕನ್ನಡ ಸಿನಿಮಾಗೂ ಮ್ಯೂಸಿಕ್ ಮಾಡ್ತೀನಿ ಎಂದು ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು. ಈ ಹಿಂದೆ ಗಣೇಶ್ ನಟನೆಯ ‘ಸಂಗಮ’ ಸಿನಿಮಾಗೆ ಮ್ಯೂಸಿಕ್ ಮಾಡಿದ್ದೇ ಎಂದು ಸ್ಮರಿಸಿದರು.

Share This Article