ಬೆಂಗಳೂರು: ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿ ಬಿಜೆಪಿಯಿಂದ (BJP) 6 ವರ್ಷ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಈಗ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಅಭಿಮಾನಿಗಳಿಂದ ಒತ್ತಡ ಇದೆ ಎಂದಿರುವ ಯತ್ನಾಳ್, ರಾಜ್ಯವೆಲ್ಲಾ ಸುತ್ತಾಡಿ ಜನಾಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಏನಿದು ಯತ್ನಾಳ್ ಲೆಕ್ಕಾಚಾರ?
ಯತ್ನಾಳ್ ಪ್ರಖರ ಹಿಂದುತ್ವವಾದಿಯಾಗಿದ್ದು ಅದೇ ಅವರ ಶಕ್ತಿ. ಹಿಂದುತ್ವ (Hindutva) ಪರಿಕಲ್ಪನೆ ಇಟ್ಟುಕೊಂಡು ಪಕ್ಷ ಸ್ಥಾಪನೆ ಮಾಡುವುದು ದೇಶದಲ್ಲಿ ಹೊಸದಲ್ಲ. ಈ ಹಿಂದೆ ಮಹಾರಾಷ್ಟ್ರದಲ್ಲಿ ಬಾಳಾ ಠಾಕ್ರೆ ಈ ಕಲ್ಪನೆ ಇಟ್ಟುಕೊಂಡು ಶಿವಸೇನೆ ಸ್ಥಾಪಿಸಿದ್ದರು. ಆದರೆ ಕರ್ನಾಟಕದ ಮಟ್ಟಿಗೆ ಹೊಸದು. ಇದನ್ನೂ ಓದಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಮೋದಿ ನಿವೃತ್ತಿ ಘೋಷಣೆ ಬಗ್ಗೆ ಮಾತನಾಡಿದ್ದಾರೆ: ಸಂಜಯ್ ರಾವತ್
ಹಿಂದುತ್ವದ ಜೊತೆಗೆ ಉತ್ತರ ಕರ್ನಾಟಕ ಅಭಿವೃದ್ಧಿ ಉದ್ದೇಶ ಹೊಸ ಪಕ್ಷಕ್ಕೆ ಬೂಸ್ಟ್ ಸಿಗಲಿದೆ. ಹಿಂದುತ್ವ ಪರ ಇರುವ ನಾಯಕರಿಂದ ಪ್ರತ್ಯಕ್ಷ, ಪರೋಕ್ಷ ಬೆಂಬಲ ಸಿಗುವ ಸಾಧ್ಯತೆಯಿದೆ.
ಹಿಂದುತ್ವ ಪರ ಇರುವ ಸಂಘಟನೆಗಳಿಂದಲೂ ಬೆಂಬಲ ಸಿಗಲಿದೆ. ಯತ್ನಾಳ್ ಉಚ್ಛಾಟನೆಯಿಂದ ಹಿಂದುತ್ವದ ಸರ್ಕಲ್‌ನಲ್ಲಿ ಅನುಕಂಪದ ಅಲೆ ಈಗ ಸ್ವಲ್ಪ ಎದ್ದಿದೆ. ಹಿಂದುತ್ವವಾದಿ ನಾಯಕರು ಒಂದೇ ವೇದಿಕೆಯಲ್ಲಿ ಸಮಾಗಮವಾಗಲಿದ್ದಾರೆ. ಇದನ್ನೂ ಓದಿ: ವಿಜಯೇಂದ್ರನ ಚಮಚಾಗಳಿದ್ರೆ ಪ್ರಶ್ನೆ ಕೇಳ್ಬೇಡಿ – ಮಾಧ್ಯಮಗಳ ಮುಂದೆ ಸಿಡಿಮಿಡಿಗೊಂಡ ಯತ್ನಾಳ್
ಹೊಸ ಪಕ್ಷ ಯಶಸ್ವಿಯಾಗುತ್ತಾ ಇಲ್ವೋ ಎನ್ನುವುದಕ್ಕೆ ಚುನಾವಣೆ ಉತ್ತರ ನೀಡಲಿದೆ. ಆದರೆ ಬಿಜೆಪಿಯಿಂದ ಹೊರ ಬಂದ ಕಾರಣ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಪಂಚಮಸಾಲಿಗಳು ನಿರ್ಣಾಯಕರಾಗಿರುವ ಕೆಲ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೊಡೆತ ಬೀಳುವ ಸಾಧ್ಯತೆಯಿದೆ.