ಬೆಂಗಳೂರು: ಇಲ್ಲ ಇಲ್ಲ ಎನ್ನುತ್ತಲೇ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಕುಟುಂಬದಿಂದ ನಾಲ್ವರು ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡೋಕೆ ಮುಂದಾಗಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ತಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧಿಸೋದು ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ಆದ್ರೆ ಕುಟುಂಬದಿಂದ ಮೂರನೇ ಅಭ್ಯರ್ಥಿಯ ಹೆಸರು ಇಂದೇ ಘೋಷಣೆಯಾಗೋ ಸಾಧ್ಯತೆಯಿದೆ.
Advertisement
Advertisement
ಮುಂದಿನ ವಿಧಾನಸಭೆಗೆ ತಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧೆ ಮಾಡೋದು ಎಂದು ವರಿಷ್ಠರು ಹೇಳಿದ್ದರು. ಈಗಲೂ ಕುಟುಂಬದಿಂದ ನಾವಿಬ್ಬರೇ ಚುನಾವಣೆ ಎದುರಿಸೋದು ಎಂದು ಹೆಚ್ಡಿಕೆ ಹೇಳ್ತಿದ್ದಾರೆ. ಆದ್ರೆ ಕಾರ್ಯಕರ್ತರು, ಕ್ಷೇತ್ರದ ಮುಖಂಡರ ಮೂಲಕ ಮೂರನೇ ಅಭ್ಯರ್ಥಿಯ ಘೋಷಣೆಯಾಗಲಿದೆ ಎಂಬ ಮಾತುಗಳು ಕೇಳಿಬರ್ತಿವೆ.
Advertisement
Advertisement
ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಘೋಷಣೆ ಆಗಲಿದ್ದು, ಸ್ಥಳೀಯ ಮುಖಂಡರು ಈ ಘೋಷಣೆ ಮಾಡಲಿದ್ದಾರೆ. ಆ ಬಳಿಕ ಮತ್ತೊಂದು ಸೀನ್ ನಡೆಯಲಿದ್ದು, ಪ್ರಜ್ವಲ್ ರೇವಣ್ಣ ಅವರ ಟಿಕೆಟ್ ವಿಚಾರದಲ್ಲೂ ಇದೇ ಪ್ಲಾನ್ ಆಗಲಿದೆ ಎಂದು ಹೇಳಲಾಗ್ತಿದೆ. ಪ್ರಜ್ವಲ್ ಬೇಲೂರಿನಿಂದ ಸ್ಪರ್ಧೆ ಮಾಡೋ ಸಾಧ್ಯತೆ ಇದೆ.
ಕಾರ್ಯಕರ್ತರ ಆಗ್ರಹಕ್ಕೆ ಮಣಿಯದಿದ್ದರೆ ಕುಟುಂಬದಲ್ಲಿ ಅಸಮಾಧಾನ ಸ್ಫೋಟಗೊಳ್ಳಲಿದ್ದು, ಅನಿತಾ ಅವರಿಗೆ ಟಿಕೆಟ್ ಕೊಟ್ಟ ಮೇಲೆ ಪ್ರಜ್ವಲ್ ಗೆ ಅವಕಾಶ ಯಾಕಿಲ್ಲ ಎಂಬ ಪ್ರಶ್ನೆ ಉಸ್ಭವಿಸಲಿದೆ. ಹೀಗಾಗಿ ಇಲ್ಲ ಇಲ್ಲ ಎನ್ನುತ್ತಲೇ ದೇವೇಗೌಡರ ಕುಟುಂಬದ ನಾಲ್ವರು ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.