ಬೆಂಗಳೂರು: ಪರಿಸರದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಆದರೆ ನಮ್ಮ ನಡುವೆ ನಮಗೆ ತಿಳಿದೋ ತಿಳಿಯದೇ ಕಾಲಿಗೆ ಸಿಕ್ಕು ಪುಟ್ಟ ಪುಟ್ಟ ಕೀಟಗಳು ಸತ್ತುಹೋಗ್ತವೆ. ಆದರೆ ಇಲ್ಲೊಬ್ಬ ವ್ಯಕ್ತಿ ನಾಶವಾಗ ಬೇಕಿದ್ದ ಕೀಟಗಳ ಮೊಟ್ಟೆಯನ್ನು ರಕ್ಷಿಸಿದ್ದಾರೆ.
ಹೌದು, ‘ಬೆಂಗಳೂರು, ರೆಡ್ ಬಗ್, ರಕ್ಷಣೆ, ಬಿಬಿಎಂಪಿ, ಪಬ್ಲಿಕ್ ಟಿವಿ ರೆಡ್ ಬಕ್ ಫ್ಯಾಮಿಲಿ’ ಜಾತಿಗೆ ಸೇರಿದ ಕೀಟದ ಮೊಟ್ಟೆಗಳನ್ನು ಬಿಬಿಎಂಪಿ ವನ್ಯಜೀವಿ ವಿಭಾಗದ ಸ್ವಯಂ ಸೇವಕ ರಾಜೇಶ್ ಅವರು ರಕ್ಷಿಸಿದ್ದಾರೆ. ಮತ್ತಿಕೆರೆಯ ಮನೆಯ ಮಟ್ಟಿಲ ಮೇಲೆ ಮೊಟ್ಟೆ ಇಡುತ್ತಿರುವ ಅಪರೂಪದ ದೃಶ್ಯ ಸೆರೆ ಸಿಕ್ಕಿದೆ. ಮೆಟ್ಟಿಲು ಕ್ಲೀನ್ ಮಾಡುವ ವೇಳೆ ರಾಜೇಶ್ ಅವರ ಗಮನಕ್ಕೆ ಬಂದಿದೆ.
Advertisement
Advertisement
ಸದ್ಯ ಮೊಟ್ಟೆ ಇಡುವ ದೃಶ್ಯ ಚಿತ್ರೀಕರಿಸಿದ ರಾಜೇಶ್, ಮೊಟ್ಟೆಯನ್ನೂ ಸೇಫ್ ಮಾಡಿದ್ದಾರೆ. ರಾಗಿ ಕಾಳಿನಷ್ಟು ದಪ್ಪ ಇರುವ 31 ಮೊಟ್ಟೆಗಳನ್ನ ತೆಳುವಾದ ಪೇಪರ್ ಮೂಲಕ ತೆಗೆದು ಮರಳಿನಲ್ಲಿ ರಕ್ಷಿಸಿದ್ದಾರೆ. 45 ದಿನಗಳ ಬಳಿಕ ಅಷ್ಟೂ ಮೊಟ್ಟೆಗಳು ಒಡೆದು ಮರಿಗಳು ಹೊರಬಂದಿದ್ದು, ಮರಿಗಳನ್ನ ಜೆಪಿ ಪಾರ್ಕ್‍ನಲ್ಲಿ ಬಿಟ್ಟಿದ್ದಾರೆ.
Advertisement
ಹಾವಿನ ಮೊಟ್ಟೆಗಳನ್ನ ರಕ್ಷಣೆ ಮಾಡಿ ಮೊಟ್ಟೆಯೊಡೆದು ಮಾರಿಯಾಗುವಂತೆ ನೋಡಿಕೊಂಡಿರುವ ಹಲವು ಪ್ರಕರಣಗಳಿವೆ. ಆದರೆ ಕೀಟದ ಮೊಟ್ಟೆಗಳನ್ನ ರಕ್ಷಿಸಿ ಮರಿಯಾಗುವಂತೆ ಮಾಡಿರುವುದು ಖುಷಿ ತಂದಿದೆ. ಇದು ಒಂದು ಶಿಕ್ಷಣವಾಗಿದ್ದು, ಹೆಚ್ಚಿನ ಸಂಶೋದನೆ ನಡೆಸಲು ಸಹಕಾರಿಯಾಗಿದೆ ಎಂದು ರಾಜೇಶ್ ಹೇಳಿದ್ದಾರೆ.
Advertisement
ಬೆಂಗಳೂರಿನ ಮಟ್ಟಿಗೆ `ಇನ್ಸೆಕ್ಟ್ ಎಗ್ ಇನ್‍ಕ್ಯುಬೇಷನ್’ ಇದೆ ಮೊದಲ ಬಾರಿಗೆ ನಡೆದಿದ್ದು, ಸ್ವಯಂ ಸೇವಕ ರಾಜೇಶ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.