– ಡ್ರೋನ್‍ನಲ್ಲಿ ವಿಡಿಯೋ ಸೆರೆ – ಬೆಂಕಿ ನಂದಿಸಲು ಹರ ಸಾಹಸ
ಚಿಕ್ಕಮಗಳೂರು: ಕಳಸದ (Kalasa) ಆನೆಗುಡ್ಡ ಮೀಸಲು ಅರಣ್ಯ ಭಾಗದ (Anegudda Reserve Forest) ಜನ ಸಂಚಾರವೇ ಇಲ್ಲದ ಗುಡ್ಡದ ತುದಿಯಲ್ಲಿ ಬೆಂಕಿ (Wildfire) ಕಾಣಿಸಿಕೊಂಡಿದೆ.
ಕಾಡ್ಗಿಚ್ಚಿಗೆ ಸುತ್ತಮುತ್ತಲಿನ ಸುಮಾರು ಹತ್ತಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಗುಡ್ಡದ ಕಾಡ್ಗಿಚ್ಚಿನ ದೃಶ್ಯ ಡ್ರೋನ್‍ನಲ್ಲಿ ಸೆರೆಯಾಗಿದೆ. ಗುಡ್ಡದ ತುದಿಯಲ್ಲಿ ಬೆಂಕಿ ಬಿದ್ದ ಪರಿಣಾಮ ಬೆಂಕಿ ನಂದಿಸಲು ಅಧಿಕಾರಿಗಳ ಹರಸಾಹಸಪಡುತ್ತಿದ್ದಾರೆ.
ಗುಡ್ಡದ ಒಂದು ಭಾಗ ಹಸಿರಿನಿಂದ ಕೂಡಿದ್ದು, ಮತ್ತೊಂದು ಭಾಗ ಸಂಪೂರ್ಣ ಒಣಗಿ ನಿಂತಿದೆ. ಪ್ರವಾಸಿಗರು, ಜನರೇ ಹೋಗದ ಜಾಗದಲ್ಲಿ ಹೇಗೆ ಬೆಂಕಿ ಬಿದ್ದಿದೆ ಎಂಬ ಬಗ್ಗೆ ಚರ್ಚೆ ಶುರುವಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಿಸಿಲ ಧಗೆಗೆ ಬೆಂಕಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.