ಆನೇಕಲ್: ಸಫಾರಿಯಲ್ಲಿದ್ದ ಹುಲಿಯ ಜೊತೆ ಕಾಡು ಹುಲಿಯೊಂದು ಜಗಳ ತೆಗೆಯುತ್ತಿರುವ ವೀಡಿಯೋ ಪ್ರವಾಸಿಗರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಬನ್ನೇರುಘಟ್ಟ ಹುಲಿ ಸಫಾರಿಯಲ್ಲಿ ಈ ಘಟನೆ ನಡೆದಿದ್ದು ಪ್ರವಾಸಿಗರನ್ನು ಭಯಭೀತಗೊಳಿಸುವಂತೆ ಮಾಡಿದೆ.
Advertisement
ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಕೆಲ ತಿಂಗಳಿಂದ ಆಗಾಗ ಕಾಣಿಸಿಕೊಂಡು ನಾಪತ್ತೆಯಾಗುತ್ತಿತ್ತು. ಅದೇ ಹುಲಿ ಇಂದು ಅರಣ್ಯ ಪ್ರದೇಶದಲ್ಲಿರುವ ಹುಲಿ ಸಫಾರಿಯ ಬಳಿ ಕಾಣಿಸಿಕೊಂಡಿದೆ. ಸಫಾರಿಯ ಒಳಗಡೆ ಇದ್ದ ಹುಲಿಯೊಂದಿಗೆ ಜಗಳ ತೆಗೆದಿದೆ. ಸಫಾರಿ ಹುಲಿ ಹಾಗೂ ಕಾಡು ಹುಲಿ ಮದ್ಯೆ ಕಬ್ಬಿಣದ ಬೇಲಿ ಇದ್ದ ಕಾರಣ ಹೆಚ್ಚಿನ ಅನಾಹುತವೇನೂ ಸಂಭವಿಸಿಲ್ಲ. ಸುಮಾರು ಹತ್ತು ನಿಮಿಷಗಳ ಕಾಲ ಎರಡು ಹುಲಿಗಳ ನಡುವೆ ಕಿತ್ತಾಟ ಮುಂದುವರೆದಿದೆ.
Advertisement
Advertisement
ಸಾಮಾನ್ಯವಾಗಿ ಸಫಾರಿಯಲ್ಲಿರುವ ಹುಲಿಗಳಿಗಿಂತ ಕಾಡಿನಲ್ಲಿ ಬೆಳೆಯುವ ಹುಲಿಗಳಿಗೆ ದೈರ್ಯ ಹಾಗೂ ಶಕ್ತಿ ಹೆಚ್ಚಾಗಿರುತ್ತದೆ. ಆದರೆ ಸಫಾರಿಯಲ್ಲಿದ್ದ ಹುಲಿ ಕೂಡ ತಾನೇನು ಕಡಿಮೆ ಇಲ್ಲ ಎಂಬಂತೆ ಕಾಡು ಹುಲಿಯನ್ನ ಹೆದರಿಸಿ ಓಡುವಂತೆ ಮಾಡಿದೆ. ಇಷ್ಟು ದಿನ ಕಾಡಂಚಿನ ಹಳ್ಳಿಗಳ ಬಳಿ ಕಾಣಿಸಿಕೊಂಡು ಭಯ ಹುಟ್ಟಿಸುತ್ತಿದ್ದ ಹುಲಿ ಇಂದು ಏಕಾಏಕಿ ಸಫಾರಿ ಬಳಿ ಕಾಣಿಸಿಕೊಂಡು ಪ್ರವಾಸಿಗರನ್ನು ಆತಂಕಕ್ಕೀಡು ಮಾಡಿತ್ತು. ಆದರೆ ಹುಲಿ ಸಫಾರಿಯನ್ನು ನೋಡಲು ಹೋಗಿದ್ದ ಪ್ರವಾಸಿಗರಿಗಂತೂ ಇಂದು ಧಬಲ್ ಧಮಾಕಾ ಕಾದಿತ್ತು. ಸಫಾರಿ ಹುಲಿಯನ್ನು ನೋಡುವುದರ ಜೊತೆಗೆ ಕಾಡು ಹುಲಿಯನ್ನು ನೋಡುವ ಅವಕಾಶ ದೊರೆತಿದೆ.
Advertisement
ತಿಂಗಳ ಹಿಂದಷ್ಟೇ ಬನ್ನೇರುಘಟ್ಟ ಸಫಾರಿ ವೇಳೆ ಸಿಂಹವೊಂದು ಕಾರಿನ ಮೇಲೆ ಏರಿ ಆತಂಕದ ವಾತಾವರಣ ಸೃಷ್ಟಿ ಮಾಡಿತ್ತು. ಅಂದು ಕೂಡಾ ಇದೇ ರೀತಿಯ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.