ಮಡಿಕೇರಿ: ಸೋಮವಾರಪೇಟೆ (Somwarpet) ತಾಲೂಕಿನ ಕಾಜೂರು (Kajuru) ಮೀಸಲು ಅರಣ್ಯದ ಬಳಿ ಇರುವ ರಾಜ್ಯ ಹೆದ್ದಾರಿಯಲ್ಲಿ ಮತ್ತೆ ಕಾಡಾನೆ (Wild Elephant ) ಪ್ರತ್ಯಕ್ಷವಾಗಿದೆ.
ಕಾಡಾನೆಗಳು ಹಗಲಲ್ಲೇ ಸಂಚರಿಸುತ್ತಿರುವುದರಿಂದ ಅಲ್ಲಿರುವ ಜನರಿಗೆ ಸಂಚರಿಸಲು ಮತ್ತು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಭಯಪಡುತ್ತಿದ್ದಾರೆ. ಕೋವರ್ ಕೊಲ್ಲಿಯ ಟಾಟಾ ಕಾಫಿ ಸಂಸ್ಥೆಯ ತೋಟದಲ್ಲಿದ್ದ ಒಂಟಿ ಸಲಗವನ್ನು ಆರ್.ಆರ್.ಟಿ ಸಿಬ್ಬಂದಿ ಹಾಗೂ ಅರಣ್ಯ ರಕ್ಷಕರು ಕಾಡಿಗಟ್ಟಲು ಮುಂದಾದ ಸಂದರ್ಭದಲ್ಲಿ ದಾಳಿ ಮಾಡಿದೆ. ಇದನ್ನೂ ಓದಿ: ಹೆಚ್‌ಡಿಡಿಯನ್ನು ಭೇಟಿ ಮಾಡಿ ಚರ್ಚಿಸಿದ ಯೋಗೇಶ್ವರ್
Advertisement
Advertisement
ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಕಾಜೂರು ಅರಣ್ಯ ಪ್ರದೇಶದ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ನಡೆದಿತ್ತು. ಸೋಮವಾರ ಬೆಳಗ್ಗೆ ಮತ್ತೆ ಕಾಜೂರಿನ ಆರ್.ಆರ್.ಟಿ ಸಿಬ್ಬಂದಿ ಹಾಗೂ ಅರಣ್ಯ ರಕ್ಷಕರು ತಂಗಿರುವ ವಸತಿಗೃಹದ ಬಳಿಗೆ ಬಂದು ಮತ್ತೆ ಕಾಡಿಗೆ ಕಾಡಾನೆ ಹಿಂದಿರುಗಿದೆ. ಇದನ್ನೂ ಓದಿ: ಮೋದಿ 3ನೇ ಬಾರಿ ಪ್ರಧಾನಿಯಾಗೋದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ – ಹೆಚ್‌ಡಿಕೆ
Advertisement
Advertisement
ಕಾಡಾನೆ ಹಗಲಿನಲ್ಲಿಯೇ ಓಡಾಡುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಮತ್ತು ಕೂಲಿ ಕಾರ್ಮಿಕರು ಭಯದಿಂದಲೇ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಮಂಡಲರಾಧನೆಗೆ ಬಾಗಲಕೋಟೆ ಅರ್ಚಕ ಆಯ್ಕೆ