ಚಿಕ್ಕಮಗಳೂರು: ಆನೆ ಕಂಡು ಸರ್ಕಾರಿ ಬಸ್ ಚಾಲಕ ಬಸ್‍ನ್ನ ಒಂದು ಕಿ.ಮೀ. ಹಿಮ್ಮುಖವಾಗಿ ಓಡಿಸಿದ್ರು, ಅದೇ ಜಾಗದಲ್ಲಿ ಹಣ್ಣಿನ ಲಾರಿಯನ್ನ ಅಡ್ಡಗಟ್ಟಿದ ಒಂಟಿ ಸಲಗ ಹಣ್ಣನ್ನು ತಿಂದು ಟೆಂಪೋವನ್ನು ಸೈಡಿಗೆ ನೂಕಿತ್ತು. ಮತ್ತದೇ ಜಾಗದಲ್ಲಿ ಒಂಟಿ ಸಲಗನ ಕಾಟಕ್ಕೆ ಪ್ರಯಾಣಿಕರು ವಾಹನಗಳನ್ನು ಹಿಂದಿರುಗಿಸಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಶಾಂತವೇರಿ ಗ್ರಾಮದಲ್ಲಿ ಒಂಟಿ ಸಲಗನ ಉಪಟಳ ಹೆಚ್ಚಾಗಿದೆ. ಈ ಮಾರ್ಗ ಹಾವು ಬಳುಕಿನ ಮೈಕಟ್ಟಿನ ರಸ್ತೆಯಾಗಿದ್ದು, ರಸ್ತೆಯ ಇಕ್ಕೆಲಗಳಲ್ಲೂ ಅರಣ್ಯ ಇರುವುದರಿಂದ ಒಂಟಿ ಸಲಗೆ ಎಲ್ಲಿರುತ್ತೆ ಎಂದು ಹೇಳಲಾಗದು. ಕಣ್ಣಿಗೆ ಬಿದ್ದರಷ್ಟೆ ಕಾಣುತ್ತದೆ.
Advertisement
Advertisement
ಎರಡು ದಿನಗಳ ಹಿಂದೆ ಇದೇ ಮಾರ್ಗವಾಗಿ ತರೀಕೆರೆಗೆ ಹೋಗುತ್ತಿದ್ದ ಬೈಕ್ ಸವಾರರು ತಿರುವಿನಲ್ಲಿ ಗಾಡಿಯನ್ನು ತಿರುಗಿಸುತ್ತಿದ್ದಂತೆ ಒಂಟಿ ಸಲಗನ ದರ್ಶನವಾಗಿದೆ. ಕೂಡಲೇ ಗಾಡಿಯನ್ನು ನಿಲ್ಲಿಸಿ, ಗಾಬರಿಯಿಂದ ಬೈಕ್ ತಿರುಗಿಸಿಕೊಂಡು ವಾಪಸ್ ಬಂದಿದ್ದಾರೆ. ಬೈಕ್ ತಿರುಗಿಸಿಕೊಂಡು ಬರಬಹುದು. ಆದರೆ ಕಾರು, ಬಸ್ಸುಗಳನ್ನ ಘಾಟಿ ರಸ್ತೆಯಲ್ಲಿ ತಿರುಗಿಸೋದು ಕಷ್ಟವಾಗುತ್ತದೆ.
Advertisement
ಅದು ಸಾಧ್ಯವಿದ್ದರೂ ಕಣ್ಣಿಗೆ ಆನೆ ಕಂಡಾಗ ಅಸಾಧ್ಯ. ಮೂರು ತಿಂಗಳ ಅವಧಿಯಲ್ಲಿ ಇದೇ ಮಾರ್ಗದ ಮಲ್ಲೆನಹಳ್ಳಿ ವ್ಯಾಪ್ತಿಯಲ್ಲಿ ಇಬ್ಬರು ಆನೆ ದಾಳಿಗೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಕೂಡಲೇ ಅಧಿಕಾರಿಗಳು ಒಂಟಿ ಸಲಗನನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Advertisement
https://www.youtube.com/watch?v=afOhLRWdGW0