ಹಾಸನ: ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದ ಬಳಿ ಕಾಡಾನೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಉಂಟು ಮಾಡಿದೆ.
ಬೃಹತ್ ಗಾತ್ರದ ಆನೆಯೊಂದು ಕಾಡು ಬಿಟ್ಟು ಮಳಲಿ ಗ್ರಾಮಕ್ಕೆ ನುಗ್ಗಿತ್ತು. ಆನೆಯನ್ನು ನೋಡಿದ ಕೆಲ ಯುವಕ ಯುವತಿರು ಮೊಬೈಲ್ ಹಿಡಿದು ವಿಡಿಯೋ ಮಾಡುತ್ತಿದ್ದರು. ಈ ವೇಳೆ ಆನೆಯು ವಿಡಿಯೋ ಮಾಡುತ್ತಿದವರ ಮೇಲೆ ದಾಳಿಗೆ ಮುಂದಾಯಿತು. ಅದೃಷ್ಟವಶಾತ್ ಗ್ರಾಮಸ್ಥರು ಅಲ್ಲಿಂದ ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ.
Advertisement
ಆನೆ ಯಾವುದೇ ಹಾನಿ ಮಾಡದೇ ಗ್ರಾಮದಿಂದ ಹೊರಗೆ ಹೋಗಿದೆ. ಆದರೆ ಮಲೆನಾಡು ಭಾಗದಲ್ಲಿ ಆನೆ ಮತ್ತು ಮಾನವನ ನಡುವಿನ ಸಂಘರ್ಷ ಮುಂದುವರಿದಿದ್ದು, ಆತಂಕಕ್ಕೆ ಕಾರಣವಾಗಿದೆ. ಕಾಡಾನೆಯನ್ನು ಕಾಡಿಗೆ ಅಟ್ಟಿ ಎಂದು ಗ್ರಾಮಸ್ಥರು, ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
Advertisement
https://www.youtube.com/watch?v=H8YDw1VvmuI&list=PLB83sv5noycvvNv2qXYeMYP4nCXV21KHP