ಬೆಂಗಳೂರು: ಮುಂಗಾರು ಮಳೆ ಸಕಾಲಕ್ಕೆ ಆಗಮಿಸದೇ ಇರುವುದರಿಂದ ಕಾಡಿನಲ್ಲಿ ಆಹಾರದ ಕೊರತೆ ಉಂಟಾಗಿದ್ದು, ಕಾಡಾನೆಗಳು ಆಹಾರ ಅರಸಿ ನಾಡಿನತ್ತ ಮುಖ ಮಾಡಿವೆ.
ಬೆಂಗಳೂರು ಹೊರವಲಯ ಆನೇಕಲ್ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಚಿನ್ನರದೊಡ್ಡಿ ಗ್ರಾಮಕ್ಕೆ ಇಂದು ಬೆಳಿಗ್ಗೆ 6 ಕಾಡಾನೆಗಳ ಗುಂಪೊಂದು ನುಗ್ಗಿದೆ. ಕಾಡಾನೆಗಳು ಗ್ರಾಮ ಸುತ್ತಮುತ್ತ ಬೆಳೆದಿದ್ದ ಬೆಳೆಗಳನ್ನು ತಿಂದು, ತುಳಿದು ನಾಶ ಮಾಡಿವೆ. ಗ್ರಾಮಸ್ಥರು ಒಂದೆಡೆಯಿಂದ ಆನೆಗಳನ್ನು ಕಾಡಿನತ್ತ ಓಡಿಸಿದರೆ, ಮತ್ತೆ ಇನ್ನೊಂದು ತುದಿಯಿಂದ ಜಮೀನುಗಳಿಗೆ ನುಗ್ಗುತ್ತಿವೆ. ಇದರಿಂದಾಗಿ ಗ್ರಾಮಸ್ತರು ಹೈರಾಣಾಗಿದ್ದಾರೆ. ಇದನ್ನೂ ಓದಿ: ಸೊಂಡಿಲಿನಿಂದ ತಿವಿದು ಕಾಡಾನೆ ದಾಳಿ, ಅದೃಷ್ಟವಶಾತ್ ಬದುಕುಳಿದ ವ್ಯಕ್ತಿ: ವಿಡಿಯೋ ನೋಡಿ
Advertisement
Advertisement
ಈಗಾಗಲೇ ಮುಂಗಾರು ಮಳೆ ಆಗಮಿಸಿ ಕಾಡಿನಲ್ಲಿರುವ ಕೆರೆ, ಹೊಂಡಗಳು ತುಂಬಿದ್ದರೆ ಹಾಗೂ ಮೇವು ಬೆಳೆದಿದ್ದರೆ ಆನೆಗಳು ನಾಡಿಗೆ ಬರುತ್ತಿರಲಿಲ್ಲ. ಆದರೆ ಮುಂಗಾರು ವಿಳಂಬದಿಂದಾಗಿ ಕಾಡು ಒಣಗಿದ್ದು ಆಹಾರ, ನೀರು ಸಿಗದೇ ಆನೆಗಳು ನಾಡಿಗೆ ಬರುತ್ತಿವೆ ಎಂದು ಗ್ರಾಮಸ್ಥರ ಹೇಳಿದ್ದಾರೆ.