ಚಿಕ್ಕಮಗಳೂರು: ಸಫಾರಿಗೆ (Safari) ಹೋಗುತ್ತಿದ್ದ ಪ್ರವಾಸಿಗರ ಜೀಪ್ ಮೇಲೆ ಕಾಡಾನೆ (Elephant) ದಾಳಿಗೆ ಮುಂದಾದ ಘಟನೆ ತರೀಕೆರೆ (Tarikere) ತಾಲೂಕಿನ ಲಕ್ಕವಳ್ಳಿ ಸಮೀಪದ ಭದ್ರಾ ಬಲದಂಡೆ ನಾಲೆ ಬಳಿ ನಡೆದಿದೆ.

ಜಂಗಲ್ ಲಾಡ್ಜ್‌ಗೆ ಸೇರಿದ ಜೀಪ್‍ನಲ್ಲಿ ಪ್ರವಾಸಿಗರು ಸಫಾರಿಗೆ ತೆರಳಿದ್ದರು. ಈ ವೇಳೆ ಭದ್ರಾ ರಂಗನಾಥ ಸ್ವಾಮಿ ದೇವಸ್ಥಾನದ ಬಳಿ ಜೀಪನ್ನು ಕಾಡಾನೆ ಅಟ್ಟಿಸಿಕೊಂಡು ಬಂದಿದೆ. ದಾಳಿಗೆ ಮುಂದಾಗುತ್ತಿದ್ದಂತೆ ಚಾಲಕ ಚಾಣಾಕ್ಷತನದಿಂದ ಜೀಪ್‍ನ್ನು ವೇಗವಾಗಿ ರಿವರ್ಸ್ ತೆಗೆದುಕೊಂಡು ಬಂದಿದ್ದಾನೆ. ಇದನ್ನೂ ಓದಿ: ಬಂಡೀಪುರ | ಸಫಾರಿ ವಾಹನವನ್ನು ಅಟ್ಟಾಡಿಸಿದ ಕಾಡಾನೆ – ವೀಡಿಯೋ ವೈರಲ್
ಚಾಲಕನ ಸಮಯಪ್ರಜ್ಞೆಯಿಂದ ಸಲಗದ ದಾಳಿಯಿಂದ ಪ್ರವಾಸಿಗರು ಜಸ್ಟ್ ಮಿಸ್ ಆಗಿದ್ದಾರೆ. ಆನೆ ಅಟ್ಟಿಸಿಕೊಂಡು ಬಂದಿರುವ ವೀಡಿಯೋ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಆನೆಯನ್ನು ಯಶಸ್ವಿಯಾಗಿ ಮೇಲಕ್ಕೆತ್ತಿದ ಅರಣ್ಯ ಇಲಾಖೆ – `ಆಪರೇಷನ್ ಕಾಡಾನೆ’ ಹೇಗಿತ್ತು?

