ಮಡಿಕೇರಿ: ಹೊಲಕ್ಕೆ ನೀರು ಹಾಯಿಸಲು ಪೈಪ್ ಜೋಡಣೆ ಮಾಡುವ ಸಂದರ್ಭದಲ್ಲಿ ಏಕಾಏಕಿ ಕಾಡಾನೆಯೊಂದು ದಾಳಿ (Wild Elephant Attack) ಮಾಡಲು ಮುಂದಾಗಿದ್ದು ರೈತರೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ (Kushalnagar) ತಾಲೂಕಿನ ಅರಿಸಿಗುಪ್ಪೆ ಗ್ರಾಮದಲ್ಲಿಂದು ನಡೆದಿದೆ.
ಗ್ರಾಮದ ನಿವಾಸಿ ಪುಟ್ಟರಾಜು (ವಿಜಯ್) ಕಾಡಾನೆ ದಾಳಿಯಿಂದ ಪಾರದ ರೈತರಾಗಿದ್ದಾರೆ (Farmers). ಶನಿವಾರ ಬೆಳಗ್ಗೆ ಸಿದ್ದಲಿಂಗಾಪುರ ಸಮೀಪದ ಅರಿಸಿಣ ಗುಪ್ಪೆ ಗ್ರಾಮದ ಪುಟ್ಟರಾಜು ತಮ್ಮ ಹೊಲಕ್ಕೆ ನಿರು ಹಾಯಿಸಲು ಪೈಪ್ ಜೋಡಿಸುತಿದ್ದರು, ಈ ವೇಳೆ ಕಾಡಾನೆ ಏಕಾಏಕಿ ದಾಳಿಗೆ ಮುಂದಾಗಿದೆ. ಕೂಡಲೇ ಅಲ್ಲಿಂದ ಕಾಲ್ಕಿತ್ತ ಪುಟ್ಟರಾಜು ಮನೆಯೊಳಗೆ ಅವಿತುಕೊಂಡಿದ್ದಾರೆ. ಬಳಿ ಮನೆಯುತ್ತ ಹೆಜ್ಜೆ ಹಾಕಿದ ಕಾಡಾನೆ ಅಲ್ಲಿಂದ ತೆರಳಿದೆ.
ಮನೆಯೊಳಗೇ ಪುಟ್ಟರಾಜು ಅವರ ಪತ್ನಿ ಮತ್ತು ತಾಯಿ ಇದ್ದರು. ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ಮನೆಯ ಮುಂಭಾಗ ನಿಲ್ಲಿಸಿದ್ದ ಬೈಕ್ ಪುಡಿ ಪುಡಿ ಮಾಡಿ ನಂತರ ಬಾಣಾವರ ಅರಣ್ಯ ಎರಪರೇ ಭಾಗಕ್ಕೆ ಕಾಡಾನೆ ತೆರಳಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.