ಹಾಸನ: ಜಿಲ್ಲೆಯ ಆಲೂರು ಸಕಲೇಶಪುರ ತಾಲೂಕಿನ ವಿವಿಧೆಡೆ ಆನೆ ಹಾವಳಿ ಮುಂದುವರೆದಿದ್ದು ಗ್ರಾಮಸ್ಥರು ಆತಂಕದಲ್ಲಿ ದಿನದೂಡುವಂತಾಗಿದೆ.
ಕಳೆದ ಸಂಜೆಯೂ ಒಂಟಿ ಸಲಗವೊಂದು ಸಕಲೇಶಪುರ ತಾಲೂಕಿನ ಯಸಳೂರು ಬಳಿ ಕಾಣಿಸಿಕೊಂಡಿದೆ. ಗ್ರಾಮದಲ್ಲಿರುವ ಕಾಫಿ ತೋಟದ ಬಳಿ ಗಾಂಭೀರ್ಯದಿಂದ ನಡೆದು ಬರುವ ಕಾಡಾನೆ ರಸ್ತೆಯಲ್ಲಿ ಓಡಾಟ ನಡೆಸಿದೆ. ಮಧ್ಯ ವಯಸ್ಸಿನ ಗಂಡಾನೆ ಇದಾಗಿದ್ದು, ಈ ಬಗ್ಗೆ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ.
Advertisement
Advertisement
ಯಸಳೂರು ಜೋಡಿ ರಸ್ತೆ ಸುತ್ತಮುತ್ತ ಆನೆಗಳ ಗುಂಪು ಕಳೆದ ಹಲವು ವರ್ಷಗಳಿಂದ ಕಾಣಿಸಿಕೊಳ್ಳುತ್ತಿದ್ದವು. ಅಲ್ಲದೇ ಕಳೆದ ಬಾರಿ ಆನೆ ದಾಳಿ ನಡೆಸಿ ಇಬ್ಬರನ್ನು ಬಲಿ ಪಡೆದಿತ್ತು. ಇದರಿಂದ ಸ್ಥಳೀಯರು ಪ್ರಾಣ ಭಯದೊಂದಿದೆ ಜೀವಿಸುವ ಅನಿವಾರ್ಯ ಸೃಷ್ಟಿಯಾಗಿದೆ. ಇಬ್ಬರನ್ನು ಕಾಡಾನೆ ಬಲಿ ಪಡೆದ ಬಳಿಕ ಎಚ್ಚತ್ತ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಎರಡು ಆನೆಗಳನ್ನು ಸೆರೆಹಿಡಿದಿತ್ತು. ನಂತರಲ್ಲಿ ಅವುಗಳನ್ನು ಬೇರೆಡೆ ಸ್ಥಳಾಂತರ ಮಾಡಿತ್ತು.
Advertisement
ಪ್ರತಿ ಬಾರಿ ದಾಳಿ ನಡೆಸಿದ ವೇಳೆ ಕಾಡಾನೆ ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಲು ಸಾಧ್ಯವಿಲ್ಲ. ಹೀಗಾಗಿ ಈ ಪ್ರದೇಶದಲ್ಲಿ ಆನೆ ಕಾರಿಡಾರ್ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Advertisement
https://www.youtube.com/watch?v=UMVgoQqLUUQ