Chamarajanagar

ಕಾಡು ಬೆಕ್ಕು ನುಂಗಿ ಜೀರ್ಣಿಸಿಕೊಳ್ಳಲಾರದೆ ಬಾಯಿಯಿಂದ ಹೊರಹಾಕಿದ ಹೆಬ್ಬಾವು

Published

on

Share this

ಚಾಮರಾಜನಗರ: ಕಾಡು ಬೆಕ್ಕೊಂದನ್ನು ನುಂಗಿದ ಹೆಬ್ಬಾವು ಅದನ್ನು ಜೀರ್ಣಿಸಿಕೊಳ್ಳಲಾರದೆ ಬಾಯಿಯಿಂದ ಹೊರಹಾಕಿದ ಘಟನೆ ಜಿಲ್ಲೆಯ ಯಳಂದೂರು ತಾಲೂಕಿನ ಮುರಟಿಪಾಳ್ಯದ ಬಳಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮುರಟಿಪಾಳ್ಯದ ಕಬ್ಬಿನ ಗದ್ದೆಯಲ್ಲಿ ಹೆಬ್ಬಾವು ಕಾಣಿಸಿಕೊಂಡಿತ್ತು. ಕಬ್ಬು ಕಟಾವು ಮಾಡುತ್ತಿದ್ದಾಗ ಸ್ಥಳೀಯರು ಈ ಹೆಬ್ಬಾವನ್ನು ನೋಡಿದ್ದಾರೆ. ಹೆಬ್ಬಾವು ಕಾಡು ಬೆಕ್ಕನ್ನು ನುಂಗಿ ಚಲಿಸಲಾರದೆ ಒದ್ದಾಡುತ್ತಾ ತಾನು ನುಂಗಿದ್ದ ಕಾಡು ಬೆಕ್ಕನ್ನು ಬಾಯಿಂದ  ಹೊರಹಾಕಲು ಹರಸಾಹಸ ಪಟ್ಟಿದೆ. ಇದನ್ನೂ ಓದಿ: ಬಿಲ್ ವಸೂಲಿಗೆ ಹೋದ ಬೆಸ್ಕಾಂ ಸಿಬ್ಬಂದಿಗೆ ಅಟ್ಟಾಡಿಸಿ ಹೊಡೆದ ಗ್ರಾಮಸ್ಥರು

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸಂತೇಮರಹಳ್ಳಿಯ ಸ್ನೇಕ್ ಮಹೇಶ್ ಈ ಅಪರೂಪದ ದೃಶ್ಯ ಸೆರೆ ಹಿಡಿದಿದ್ದಾರೆ. ಬಳಿಕ ಹೆಬ್ಬಾವನ್ನು ರಕ್ಷಿಸಿ ಬಿಳಿಗಿರಿರಂಗನಬೆಟ್ಟದ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಇದನ್ನೂ ಓದಿ: ಮಾಂಜ್ರಾನದಿ ದಡದಲ್ಲಿ ಎದುರಾದ ಪ್ರವಾಹ ಸ್ಥಿತಿ – ಸಾವಿರಾರು ಎಕರೆ ಬೆಳೆ ಸರ್ವನಾಶ

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications