CinemaKarnatakaLatestMain PostTV Shows

‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ: ಅಚ್ಚರಿಯ ಮತ್ತೊಂದು ಹೆಸರು

ಬಿಗ್ ಬಾಸ್ ಸೀಸನ್ 9 ಈಗಾಗಲೇ ಏಳು ವಾರಗಳನ್ನು ಮುಗಿಸಿ, ಎಂಟನೇ ವಾರಕ್ಕೆ ಕಾಲಿಡುತ್ತಿದೆ. ಈ ವೇಳೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕುರಿತಂತೆ ಹಲವು ದಿನಗಳಿಂದ ನಾನಾ ಹೆಸರುಗಳು ಕೇಳಿ ಬರುತ್ತಿವೆ. ಈ ಹಿಂದೆ ಸೋನು ಶ್ರೀನಿವಾಸ್ ಗೌಡ ದೊಡ್ಮನೆ ಮರು ಪ್ರವೇಶ ಮಾಡುತ್ತಾರೆ ಎಂದು ಹೇಳಲಾಗಿತ್ತು. ಓಟಿಟಿ ಸೀಸನ್ ನಲ್ಲಿದ್ದ ಸೋನು ಗೌಡಗೆ ಬಿಗ್ ಬಾಸ್ ಸೀಸನ್ 9ಕ್ಕೂ ಹೋಗುತ್ತಾರೆ ಎನ್ನುವ ಮಾಹಿತಿ ಇತ್ತು. ಆದರೆ, ಈವರೆಗೂ ಅದು ಆಗಲಿಲ್ಲ.

ಸೋನು ಶ್ರೀನಿವಾಸ್ ಗೌಡ ಹೆಸರು ಕೇಳಿ ಬಂದ ಬೆನ್ನಲ್ಲೇ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಕೂಡ ಬಿಗ್ ಬಾಸ್ ಮನೆ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುದ್ದಿ ಹರಿದಾಡಿತು. ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಅವರನ್ನು ಕಟ್ಟಿಹಾಕಲು ಚಕ್ರವರ್ತಿ ಚಂದ್ರಚೂಡ ಸರಿಯಾದ ಆಟಗಾರ. ಹಾಗಾಗಿ ಚಕ್ರವರ್ತಿ ಚಂದ್ರಚೂಡಗೆ ಈ ಬಾರಿ ಮತ್ತೊಮ್ಮೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಲಾಯಿತು. ಆದರೆ, ಈವರೆಗೂ ಅದು ಕೂಡ ಆಗಿಲ್ಲ. ಇದನ್ನೂ ಓದಿ: ವ್ಯಾಯಾಮ ಮಾಡುತ್ತಿದ್ದಾಗ ಜಿಮ್ ನಲ್ಲಿ ಕುಸಿದು ಬಿದ್ದು ನಟ ಸಿದ್ಧಾಂತ್ ನಿಧನ

ಇದೀಗ ಮತ್ತೊಂದು ಅಚ್ಚರಿಯ ಹೆಸರು ಕೇಳಿ ಬಂದಿದ್ದು, ಮೊನ್ನೆಯಷ್ಟೇ ಮನೆಯಿಂದ ಹೊರ ಬಂದಿರುವ ಸಾನ್ಯ  ಅಯ್ಯರ್ ಅವರನ್ನು ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆ ಒಳಗೆ ಕಳುಹಿಸುತ್ತಾರೆ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಾನ್ಯ ಮತ್ತೆ ಹೋಗಲಿ ಎನ್ನುವ ಒತ್ತಾಯ ಕೂಡ ಕೇಳಿ ಬರುತ್ತಿದೆ. ಬಿಗ್ ಬಾಸ್ ಮನೆಯಿಂದ ಆಚೆ ಬಂದ ತಕ್ಷಣ ಹಲವು ಮಾಧ್ಯಮಗಳಿಗೆ ಸ್ಪರ್ಧಿಗಳು ಸಂದರ್ಶನ ನೀಡುತ್ತಿದ್ದರು. ಆದರೆ, ಸಾನ್ಯ ಈವರೆಗೂ ಯಾವುದೇ ಮಾಧ್ಯಮಕ್ಕೆ ಸಿಕ್ಕಿಲ್ಲ. ಹಾಗಾಗಿ ಇಂಥದ್ದೊಂದು ಮಾತು ಕೇಳಿ ಬಂದಿದೆ.

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಗಾಗಿ ಸಾನ್ಯ ಅಯ್ಯರ್, ಸೋನು ಶ್ರೀನಿವಾಸ್ ಗೌಡ, ಚಕ್ರವರ್ತಿ ಚಂದ್ರಚೂಡ ಮುಂತಾದವರ ಹೆಸರು ಕೇಳಿ ಬರುತ್ತಿವೆ ಹೊರತು, ಈವರೆಗೂ ಯಾರೂ ಮನೆ ಒಳಗೆ ಪ್ರವೇಶ ಮಾಡಿಲ್ಲ. ಈ ಸೀಸನ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಇರತ್ತಾ ಎನ್ನುವುದು ಗೊತ್ತಿಲ್ಲ. ಆದರೂ, ವಾರದಿಂದ ವಾರಕ್ಕೆ ಒಬ್ಬೊಬ್ಬರ ಹೊಸ ಹೆಸರಂತೂ ಕೇಳಿ ಬರುತ್ತಿದೆ.

Live Tv

Leave a Reply

Your email address will not be published. Required fields are marked *

Back to top button