ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 10 (Bigg Boss Kannada 10) ಇದೀಗ 8ನೇ ವಾರಕ್ಕೆ ಕಾಲಿಟ್ಟಿದೆ. ದೊಡ್ಮನೆ ಆಟದಲ್ಲಿ ರೋಚಕ ತಿರುವು ಪಡೆದುಕೊಳ್ತಿರೋ ಬೆನ್ನಲ್ಲೇ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಹೊಸ ಎಂಟ್ರಿಗೆ ಸ್ಪರ್ಧಿಗಳು ಶಾಕ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಪ್ರತಿ ಸೀಸನ್‌ನಲ್ಲೂ ವೈಲ್ಡ್ ಕಾರ್ಡ್ ಎಂಟ್ರಿ ಕೊಡುತ್ತಾರೆ. ಅದರಂತೆ ಈ ಬಾರಿ ಕೂಡ ಮಾಡೆಲ್ ಪವಿ ಪೂವಪ್ಪ, ನಟ- ಕ್ರಿಕೆಟರ್ ಅವಿನಾಶ್ ಶೆಟ್ಟಿ (Avinash Shetty) ಅವರು ಈಗ ಬಿಗ್ ಬಾಸ್‌ಗೆ ಕಾಲಿಟ್ಟಿದ್ದಾರೆ.
ಈಗ ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಈಗ ಶುರುವಾಗಿದೆ. ಕೊಡಗಿನ ಕುವರಿ ಪವಿ ಪೂವಪ್ಪ ಮಾಡೆಲ್ ಆಗಿ ಸಾಕಷ್ಟು ಜಾಹಿರಾತುಗಳಲ್ಲಿ ನಟಿಸಿದ್ದಾರೆ. ಅವಿನಾಶ್ ಶೆಟ್ಟಿ ಅವರು ಸೋನು ಸೂದ್ ನಟನೆಯ ಶ್ರೀಮಂತ ಚಿತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಬಳಿಕ ಆಲಿಯಾ ಡೀಪ್‌ಫೇಕ್ ವಿಡಿಯೋ ವೈರಲ್
ಸ್ನೇಕ್ ಶ್ಯಾಮ್, ಗೌರೀಶ್, ರಕ್ಷಕ್ ಬುಲೆಟ್, ಇಶಾನಿ, ಭಾಗ್ಯಶ್ರೀ ಬಳಿಕ ಇದೀಗ ನೀತು ವನಜಾಕ್ಷಿ ಎಲಿಮಿನೇಟ್ ಆಗಿದ್ದಾರೆ. 11 ಮಂದಿ ಸ್ಪರ್ಧಿಗಳು ಇರುವ ಮನೆಗೆ ಪವಿ ಮತ್ತು ಅವಿನಾಶ್ ಎಂಟ್ರಿ ಕೊಟ್ಟಿರೋದು ಮನೆಮಂದಿಗೆ ಶಾಕ್ ಕೊಟ್ಟಿದೆ. ಇದರಲ್ಲಿ ನಾಮಿನೇಟ್ ಫೈಟ್ ಕೂಡ ಇದೆ. ಹಾಗಾದ್ರೆ ಮುಂದೆ ಮನೆಯಲ್ಲಿ ಏನೆಲ್ಲಾ ಟ್ವಿಸ್ಟ್ ಸಿಗಲಿದೆ ಕಾದುನೋಡಬೇಕಿದೆ.