ದೊಡ್ಮನೆಯಲ್ಲಿ (BBK 11) ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ (Shobha Shetty) ಮತ್ತು ರಜತ್ (Rajath) ಎಂಟ್ರಿ ಕೊಟ್ಮೇಲೆ ಉಳಿವಿಕೆಗಾಗಿ ಸ್ಪರ್ಧಿಗಳ ಸೆಣಸಾಟ ಜೋರಾಗಿದೆ. ಇನ್ನೂ ಬಿಗ್ ಬಾಸ್ ಕೊಟ್ಟ ಟಾಸ್ಕ್‌ವೊಂದರಲ್ಲಿ ಎತ್ತರದಿಂದ ಶೋಭಾ ಶೆಟ್ಟಿ ಬಿದ್ದಿದ್ದಾರೆ. ಪೆಟ್ಟು ಮಾಡಿಕೊಂಡ ಶೋಭಾರನ್ನು ನೋಡಿ ಸ್ಪರ್ಧಿಗಳು ಗಾಬರಿಯಾಗಿದ್ದಾರೆ. ಇದನ್ನೂ ಓದಿ:‘ಜೀಬ್ರಾ’ಗೆ ‘ಭೀಮ’ ಬೆಂಬಲ- ಡಾಲಿ, ಸತ್ಯದೇವ್ ಚಿತ್ರಕ್ಕೆ ದುನಿಯಾ ವಿಜಯ್ ಸಾಥ್
‘ಬಿಗ್ ಬಾಸ್’ ಮನೆಯ ಆಟಕ್ಕೆ 50 ದಿನ ಪೂರೈಸಿದೆ. ರೋಚಕ ತಿರುವು ಪಡೆದು ಮುನ್ನುಗ್ಗತ್ತಿದೆ. ಇನ್ನೂ ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಅವರು ಉಗ್ರಂ ಮಂಜುಗೆ ತಿರುಗೇಟು ಕೊಟ್ಟಿರುವ ರೀತಿ ನೋಡಿ ಅವರು ಎಂತಹ ಗಟ್ಟಿ ಸ್ಪರ್ಧಿ ಎಂಬುದು ಮನೆ ಮಂದಿ ಗೊತ್ತಾಗಿದೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಮಹಾ ತಿರುವು- ಕಾವೇರಿ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಬಂದ ಕೀರ್ತಿ
ಇಂದಿನ ಸಂಚಿಕೆಯಲ್ಲಿನ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಅದರಲ್ಲಿ ಶೋಭಾ ಮತ್ತು ಭವ್ಯಾ ಗೌಡ ನೇತೃತ್ವದಲ್ಲಿ ಎರಡು ಟೀಮ್‌ಗಳಾಗಿ ವಿಂಗಡಿಸಿದ್ದಾರೆ. ಎದುರಾಳಿ ತಂಡ ಭವ್ಯಾಗಿಂತ (Bhavya Gowda) ವೇಗವಾಗಿ ಟಾಸ್ಕ್ ಪೂರ್ಣಗೊಳಿಸಬೇಕು ಎಂಬ ಆತುರದಲ್ಲಿ ಶೋಭಾ ಆಟ ಆಡುವಾಗ ಎತ್ತರದಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಸಹಸ್ಪರ್ಧಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ.
View this post on Instagram
ಶೋಭಾಗೆ ತೀವ್ರವಾಗಿ ಪೆಟ್ಟು ಆಗಿದ್ಯಾ? ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿದು ಬರಲಿದೆ. ನಟಿಗೆ ಏನಾಗಿದೆ ಎಂಬುದನ್ನು ಕಾದುನೋಡಬೇಕಿದೆ.