ಬಾಗ್ದಾದ್: ಇರಾಕ್‍ನಲ್ಲಿ ಬುಡಕಟ್ಟು ಜನರ ಮೇಲೆ ದಾಳಿಗೆ ತಯಾರಿ ನಡೆಸಿದ್ದ ಐಸಿಸ್ ಉಗ್ರರ ಗುಂಪಿನ ಮೇಲೆ ಕಾಡುಹಂದಿಗಳು ದಾಳಿ ಮಾಡಿದ್ದು, ಮೂವರು ಉಗ್ರರು ಸಾವನ್ನಪ್ಪಪಿದ್ದಾರೆ.
ಸ್ಥಳೀಯರ ಮಾಹಿತಿಯ ಪ್ರಕಾರ ಉಗ್ರರು ಇಲ್ಲಿನ ಕಿರ್ಕುಕ್ ಬಳಿಯಿರುವ ಹಮ್ರಿನ್ ಬೆಟ್ಟದ ಸಮೀಪದಲ್ಲಿ ಅಡಗಿದ್ದರು. ಕಾಡುಹಂದಿಗಳು ಮೂವರು ಐಸಿಸ್ ಉಗ್ರರನ್ನು ಕೊಂದಿದ್ದು, ಐವರನ್ನು ಗಂಭೀರವಾಗಿ ಗಾಯಗೊಳಿಸಿವೆ.
Advertisement
ಇಲ್ಲಿನ ಉಬೇದ್ ಬುಡಕಟ್ಟು ಜನಾಂಗದ ಮುಖ್ಯಸ್ಥರು ಹಾಗೂ ಐಸಿಸ್ ನಿಗ್ರಹ ದಳದ ಮೇಲ್ವಿಚಾರಕರಾದ ಶೇಖ್ ಅನ್ವರ್-ಅಲ್ ಅಸ್ಸಿ ಅವರು ಹೇಳೋ ಪ್ರಕಾರ ಹವೀಜಾ ಪ್ರದೇಶವನ್ನ ಉಗ್ರರು ವಶಪಡಿಸಿಕೊಂಡ ನಂತರ ಇಲ್ಲಿನ ಬೆಟ್ಟಪ್ರದೇಶವನ್ನು ಬುಡಕಟ್ಟು ಜನರು ಬಿಟ್ಟು ಹೋಗಿದ್ದು ಅವರ ಮೇಲೆ ಉಗ್ರರು ದಾಳಿಗೆ ಉದ್ದೇಶಿಸಿದ್ದರು ಎನ್ನಲಾಗಿದೆ.
Advertisement
ಹತ್ತಿರದ ಜೋಳದ ಹೊಲ ಹಾಗೂ ಇಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಡುಹಂದಿಗಳಿಗೆ ಇವರ ಓಡಾಟದಿಂದ ಕಿರಿಕಿರಿಯಾಗಿರಬಹುದು ಎಂದು ಅವರು ಹೇಳಿದ್ದಾರೆ.
Advertisement
ಹವಿಜಾದಿಂದ ಓಡಿಹೋಗಲು ಯತ್ನಿಸಿದ 25 ಮಂದಿಯನ್ನ ಉಗ್ರರು ಕೊಂದಿದ್ದು, ಸ್ಥಳವನ್ನು ಬಿಟ್ಟುಹೋಗಲು ತಯಾರಿ ನಡೆಸಿದವರನ್ನೂ ಕೊಲ್ಲಬೇಕೆಂದಿದ್ದರು. ಆದ್ರೆ ಕಾಡುಹಂದಿಗಳಿಂದ ಅವರೇ ಸಾವನ್ನಪ್ಪದ್ದಾರೆ ಎಂದು ಶೇಖ್ ಹೇಳಿದ್ದಾರೆ.
Advertisement
ಹವೀಜಾ ಇರಾಖ್‍ನ ಮೊಸುಲ್ ನಗರದಿಂದ 100 ಮೈಲಿ ದೂರದಲ್ಲಿದ್ದು, ವಿಮೋಚನೆಯಾಗುವ ಹಂತದಲ್ಲಿದೆ. ಆದ್ರೆ ಐಸಿಸ್ ವಿರುದ್ಧ ಹೋರಾಟದಲ್ಲಿದೆ ಎಂದು ವರದಿಯಾಗಿದೆ.