ಮಡಿಕೇರಿ: ಕೊಡಗಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ. ಸೋಮವಾರ ಪೇಟೆ ತಾಲ್ಲೂಕಿನ ಭುವಂಗಾಲ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಾಡಾನೆಗಳ (Elephant) ಹಿಂಡು ಬೀಡುಬಿಟ್ಟಿವೆ. ಇದರಿಂದಾಗಿ ಜನ ಆತಂಕಗೊಂಡಿದ್ದಾರೆ.
ಭುವಂಗಾಲ ಗ್ರಾಮದ ರಸ್ತೆಯಲ್ಲಿ ಮರಿಯಾನೆ ಸೇರಿ 11 ಕಾಡಾನೆಗಳ (Forest Elephant) ಹಿಂಡು ನಡು ರಸ್ತೆಯಲ್ಲಿ ಸಂಚಾರ ಮಾಡಿದ ವೀಡಿಯೋ ಸದ್ದು ಮಾಡುತ್ತಿವೆ. ಇದನ್ನೂ ಓದಿ: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮರಕುಂಬಿಯ 98 ಅಪರಾಧಿಗಳಿಗೆ ಜಾಮೀನು
ರಸ್ತೆಯಲ್ಲೇ ಕೆಲಕಾಲ ಅಡ್ಡಗಟ್ಟಿದ್ದ ಕಾಡಾನೆಗಳು ಬಳಿಕ ಸುತ್ತಮುತ್ತಲಿನ ಕಾಫಿ ತೋಟಕ್ಕೆ ನುಗ್ಗಿ ದಾಂಧಲೆ ನಡೆಸಿವೆ. ಇದರಿಂದ ಅಪಾರ ಬೆಳೆ ನಾಶವಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆಗಳ ಹಿಂಡನ್ನು ಪುನಃ ಕಾಡಿಗೆ ಓಡಿಸಲು ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: ಹಿಪ್ಪರಗಿ ಕಬಡ್ಡಿ ವೈಭವ – ಕಣ್ಮನ ಸೆಳೆದ ಅಂತರ್ ರಾಜ್ಯ ಮಹಿಳಾ ಟೂರ್ನಿ
ಜಿಲ್ಲೆಯ ಒಂದು ಭಾಗದಲ್ಲಿ ಹುಲಿ ಕಾರ್ಯಚರಣೆ, ಇನೊಂದು ಭಾಗದಲ್ಲಿ ಕಾಡಾನೆಗಳ ಉಪಟಳ ತಡೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರಿಂದ ಜೀವಭಯದಲ್ಲಿ ಗ್ರಾಮದ ಜನ ಮತ್ತು ಕೂಲಿ ಕಾರ್ಮಿಕರು ದಿನ ಕಳೆಯುವಂತಾಗಿದೆ. ಇದನ್ನೂ ಓದಿ: PUBLiC TV Impact | ಕೃಷ್ಣಾ ನದಿಗೆ ಭೇಟಿ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿ