ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ತಮ್ಮ ಮುಂಬರುವ ಚಿತ್ರ ‘ಘೂಮರ್’ ಸೆಟ್‍ನಲ್ಲಿ ಶನಿವಾರ (ಫೆ. 5) ರಂದು 46ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸಾಮಾಜಿಕ ಜಾಲತಾಣದಲ್ಲಿ ಅವರ ಸ್ನೇಹಿತರು ಹಾಗೂ ಕುಟುಂಬದವರು ಹುಟ್ಟುಹಬ್ಬದ ಪ್ರಯುಕ್ತ ಶುಭಾಶಯಗಳನ್ನು ಸಲ್ಲಿಸಿದ್ದಾರೆ.
ಪತ್ನಿ ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಅವರಿಗೆ ಹುಟ್ಟುಹಬ್ಬದ ಸಂದೇಶವನ್ನು ನೀಡಿದ್ದು, ತಮ್ಮ ಕುಟುಂಬದ ಜೊತೆಗೆ ಮಗಳು ಆರಾಧ್ಯ ಹಾಗೂ ಪತಿಯ ಬಾಲ್ಯದ ಫೋಟೋವನ್ನು ಕೊಲಾಜ್ ಮಾಡಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ
View this post on Instagram
- Advertisement
ಹ್ಯಾಪಿ ಹ್ಯಾಪಿ ಬರ್ತ್‍ಡೇ ಡಿಯರೆಸ್ಟ್ ಬೇಬಿ- ಲವ್ ಯೂ ಪಪ್ಪಾ, ನಿಮಗೆ ನನ್ನಿಂದ ಪ್ರೀತಿಯ ಅಪ್ಪುಗೆಗಳು. ದೇವರು ನಿಮಗೆ ಹೆಚ್ಚು ಸಂತೋಷ, ಶಾಂತಿ, ಉತ್ತಮ ಆರೋಗ್ಯ, ತೃಪ್ತಿ, ಶಾಂತತೆ ಹೀಗೆ ಜೀವನದಲ್ಲಿ ನೀವು ಬಯಸುವುದೆಲ್ಲವನ್ನು ಆಶೀರ್ವದಿಸಲಿ ಎಂದು ಶೀರ್ಷಿಕೆ ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್
- Advertisement
ಐಶ್ವರ್ಯಾ ರೈ ಅವರು ಈಗಾಗಲೇ ತಮಿಳಿನ ಮಣಿರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್’ ಚಿತ್ರದ ಮೂಲಕ ಚಲನಚಿತ್ರರಂಗಕ್ಕೆ ಮತ್ತೆ ಮರಳಲು ಸಿದ್ಧರಾಗಿದ್ದಾರೆ. ಚಿತ್ರವು ಇದೇ 2022ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
View this post on Instagram
ಇದರ ಮಧ್ಯೆ ಅಭಿಷೇಕ್ ಬಚ್ಚನ್ ಕೊನೆಯದಾಗಿ ‘ಬಾಬ್ ಬಿಸ್ವಾಸ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಅಭಿಷೇಕ್ ಅಸಂಭವ ಆದರೆ ಮಾರಣಾಂತಿಕ ಒಪ್ಪಂದದ ಕೊಲೆಗಾರನಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದೆ. ನಂತರ ತಂದೆ ಬಿಗ್ ಬಿ ಕೂಡ ತಮ್ಮ ಮಗನ ನಟನೆಯ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಟ್ವೀಟ್ ಮಾಡಿದ್ದರು.
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ 2007 ಏಪ್ರಿಲ್ 20 ರಂದು ವಿವಾಹವಾಗಿದ್ದು, ಈ ಜೋಡಿಗೆ ಆರಾಧ್ಯ ಬಚ್ಚನ್ ಎಂಬ ಮಗಳಿದ್ದಾಳೆ.