ಮಂಡ್ಯ: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ (Mandya) ತಾಲೂಕಿನ ಕೆ.ಗೌಡಗೆರೆ ಗ್ರಾಮದಲ್ಲಿ ನಡೆದಿದೆ.
ಜಾಹ್ನವಿ (26) ಮೃತ ಗೃಹಿಣಿ. ಮೃತ ಜಾಹ್ನವಿ ಕುಟುಂಬಸ್ಥರು ಪತಿ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. 4 ವರ್ಷದ ಹಿಂದೆ ಜಾಹ್ನವಿ, ಯಶ್ವಂತ್ ಎಂಬಾತನೊಂದಿಗೆ ವಿವಾಹವಾಗಿತ್ತು (Marriage). ಯಶ್ವಂತ್ ಕಾಂಗ್ರೆಸ್ ಮುಖಂಡನಾಗಿದ್ದನು. ಮದುವೆಯಾದಗಿನಿಂದಲೂ ಜಾಹ್ನವಿಗೆ ಕಿರುಕುಳ ನೀಡುತ್ತಿದ್ದ ಹಾಗೂ ಕುಡಿದು ಮನಸ್ಸೋ ಇಚ್ಛೆ ಹಲ್ಲೆ ಮಾಡ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಏರ್ ಶೋನಲ್ಲಿ ಗಮನ ಸೆಳೆಯುತ್ತಿದೆ 10 ಕೋಟಿ ಮೌಲ್ಯದ ಪೈಲಟ್ ಹೆಲ್ಮೆಟ್
Advertisement
Advertisement
ಗುರುವಾರ ಜಾಹ್ನವಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯಶ್ವಂತ್ ಕುಟುಂಬಸ್ಥರಿಗೆ ತಿಳಿಸಿದ್ದಾನೆ. ಜಾಹ್ನವಿ ಪೋಷಕರು ಬಂದು ನೋಡಿದಾಗ ಮೃತದೇಹದ ಮೈಮೇಲೆ, ಮುಖದ ಮೇಲೆ ರಕ್ತ ಕಲೆ ಇತ್ತು ಎಂದು ಹೇಳಲಾಗುತ್ತಿದೆ.
Advertisement
ಹಲ್ಲೆ ನಡೆಸಿ ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಯಶ್ವಂತ್ ಕುಡಿದು, ಗಾಂಜಾ ಸೇವಿಸಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಜಾಹ್ನವಿ ಪೋಷಕರು ಆರೋಪ ಮಾಡಿದ್ದಾರೆ. ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ : ಚಿಕ್ಕಮಗಳೂರು | ಸರ್ವೆಯರ್ ಆತ್ಮಹತ್ಯೆ ಕೇಸ್ – ಹನಿಟ್ರ್ಯಾಪ್‌ಗೆ ಬಲಿ ಶಂಕೆ